20.6 C
Shimoga
Friday, December 9, 2022

ಪತ್ರಕರ್ತನ ಮೇಲೆ ಹಲ್ಲೆ ; ಪ್ರತಿಭಟಿಸಿ ಕ್ರಮ ಕೈಗೊಳ್ಳಲು ಒತ್ತಾಯ

ಶಿಕಾರಿಪುರ : ಪತ್ರಕರ್ತರ ಮೇಲೆ ಸದಾ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲ್ಲೂಕು ಘಟಕದ ವತಿಯಿಂದ ಇಂದು ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುವುದಲ್ಲದೇ, ಹಲ್ಲೆಕೋರರನ್ನು ಕೂಡಲೇ ಬಂಧಿಸುವುದಲ್ಲದೇ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸುವ ವೇಳೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ ಎಸ್ ಹುಚ್ರಾಯಪ್ಪ ಮಾತನಾಡಿ, ಸಾಗರ ತಾಲೂಕು ಶಾಖೆಯ ಸದಸ್ಯರಾದ ಹೊಸದಿಗಂತ ಪತ್ರಿಕೆಯ ವರದಿಗಾರರಾದ ಬಿ ಡಿ ರವಿಕುಮಾರ್ ರವರ ಮೇಲೆ ಅ.19 ರಂದು, ಗ್ರಾಮಸ್ಥರ ಮನವಿ ಮೇರೆಗೆ ಹೊಸಕೊಪ್ಪ ಗ್ರಾಮಕ್ಕೆ ರಸ್ತೆ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಗಮನ ಸೆಳೆಯಲು ವರದಿ ಮಾಡಲು ಸ್ಥಳಕ್ಕೆ ತೆರಳಿದ್ದರು.

ಈ ಸಂದರ್ಭದಲ್ಲಿ ಕಲ್ಲುಕೋರೆ ನಡೆಸುತ್ತಿರುವ ಬಸವರಾಜ ಎಂಬ ವ್ಯಕ್ತಿಯು ಕಲ್ಲುಕೋರೆಗೆ ತೊಂದರೆ ಮಾಡುತ್ತೀಯ ಎಂದು ಹಲ್ಲೆ ಮಾಡಿರುತ್ತಾರೆ. ನೀನು ಸುದ್ದಿ ಮಾಡಿದರೆ ನಮ್ಮ ಕಲ್ಲು ಕ್ವಾರೆಯನ್ನು ಅಧಿಕಾರಿಗಳು ಮುಚ್ಚುತ್ತಾರೆ ಎಂದು ಹಲ್ಲೆ ನಡೆಸಿರುತ್ತಾರೆ ಅಲ್ಲದೇ ಇನ್ನೊಮ್ಮೆ ಮಾಡಲು ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ನಾವು ಖಂಡಿಸುತ್ತೇವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗವೂ ನಾಲ್ಕನೇ ಅಂಗವಾಗಿ ಕೆಲಸಮಾಡುತ್ತಿದೆ ಪತ್ರಕರ್ತರು ನಿರ್ಭಿತಿಯಿಂದ ವರದಿಗಾರಿಕೆ ಮಾಡಲು ಅಡ್ಡಿಪಡಿಸುವ ಕೆಲಸ ಮಾಡುವ ಸಮಾಜಘಾತಕ ಶಕ್ತಿಗಳು ನಿರಂತರವಾಗಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿಕೊಂಡು ಬರುತ್ತಿವೆ. ಈಗ ಬಿ ಡಿ ರವಿಕುಮಾರ್ ಮೇಲೆ ಇಂತಹದೇ ಹಲ್ಲೆ ನಡೆಸಲಾಗಿದೆ ಇದರಿಂದ ಪತ್ರಿಕಾಧರ್ಮವನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಭಾಸವಾಗಿದೆ ಆದ್ದರಿಂದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಠದ್, ಕಾರ್ಯದರ್ಶಿ ಬಿ ಎಲ್ ರಾಜಪ್ಪ, ಟ್ರಸ್ಟ್ ಅಧ್ಯಕ್ಷ ಇ ಹೆಚ್ ಬಸವರಾಜ್, ಮಾಜಿ ಅಧ್ಯಕ್ಷ ಎಸ್ ಬಿ ಅರುಣ್ ಕುಮಾರ್, ಸದಸ್ಯರಾದ ಹೆಚ್ ಎಸ್ ರಘು, ಹೆಚ್ ಕೆ ಪ್ರಕಾಶ್, ಕಾಳಿಂಗ ರಾವ್, ಪ್ರಕಾಶ್, ರಘು ನಿರ್ಮಿತ್,  ಮಂಜುನಾಥ್ ಮಠದ್ ರಾಜಾರಾವ್ ಎಂ ಜಾಧವ್ ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!