20.6 C
Shimoga
Friday, December 9, 2022

ಪತ್ರಕರ್ತ ರವಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ


ರಿಪ್ಪನ್‌ಪೇಟೆ : ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಪಟ್ಟಣದ ಪತ್ರಕರ್ತ ಸಂಘಟನೆಗಳಿಂದ ಉಪವಿಭಾಗದಿಕಾರಿಗಳಿಗೆ ಗ್ರಾಮಲೆಕ್ಕಾಧಿಕಾರಿ ಜಾಕೀರ್ ಹುಸೇನ್ ಮೂಲಕ ಇಂದು ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಹಿರಿಯ ಪತ್ರಕರ್ತ ತ.ಮ. ನರಸಿಂಹ, ಬುಧವಾರ ಸಂಜೆ 4 ಗಂಟೆಗೆ ಹೊಸದಿಗಂತ ಪತ್ರಿಕೆ ವರದಿಗಾರರಾದ ಬಿ.ಡಿ ರವಿಕುಮಾರ್ ಅವರು ಸಾಗರ ತಾಲ್ಲೂಕಿನ ಆನಂದಪುರ ಬಳಿಯ ಕೆ. ಹೊಸಕೊಪ್ಪದಲ್ಲಿ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮ ಮತ್ತು ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ವರದಿಗಾಗಿ ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಕಲ್ಲುಗಣಿಗಾರಿಕೆಯ ಬಸವರಾಜು ಎಂಬ ವ್ಯಕ್ತಿ ತನ್ನ ಸಹಚರದೊಂದಿಗೆ ಆಗಮಿಸಿ ಪತ್ರಕರ್ತ ರವಿಕುಮಾರ್ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುತ್ತಾನೆ. ಇಲ್ಲಿಗೆ ಬಂದು ಯಾವ ಪತ್ರಕರ್ತರು ವರದಿ ಮಾಡಬಾರದು ಎಂದು ಬೆದರಿಕೆ ಹಾಕಿದ್ದಲ್ಲದೆ, ಕೊಲೆ ಮಾಡುವುದಾಗಿಯೂ ಜೀವಬೆದರಿಕೆ ಹಾಕಿರುತ್ತಾರೆ.

ಪತ್ರಕರ್ತ ಬಿ.ಡಿ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಸವರಾಜು ಮತ್ತಿತರರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಸಂಘವು ಆಗ್ರಹಿಸುತ್ತದೆ ಎಂದರು.

ಈ ಸಂಧರ್ಭದಲ್ಲಿ ಪತ್ರಕರ್ತರುಗಳಾದ ರಿ.ರಾ. ರವಿಶಂಕರ್, ಚಿದಾನಂದ ಸ್ವಾಮಿ, ಪರಶುರಾಮ್, ಸಬಾಸ್ಟಿನ್ ಮಾಥ್ಯೂಸ್, ಸುಧೀಂದ್ರ ಹೆಬ್ಬಾರ್, ರಫಿ ರಿಪ್ಪನ್‌ಪೇಟೆ ಮತ್ತು ದೇವರಾಜ್ ಆರಗ, ಫಿಯೂಸ್ ರೋಡ್ರಿಗಸ್ ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!