24.3 C
Shimoga
Friday, December 9, 2022

ಪತ್ರಿಕಾರಂಗ ಕಲುಷಿತಗೊಂಡಿದ್ದರೂ ಕೂಡ ನೈಜ, ನಿಖರ ಸುದ್ದಿಯೊಂದಿಗೆ ಗಟ್ಟಿಯಾಗಿ ನೆಲೆ ನಿಂತಿವೆ ; ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಪ್ರಜಾಪ್ರಭುತ್ವದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮೂರರ ನಂತರದಲ್ಲಿ ಪತ್ರಿಕಾರಂಗ ನಾಲ್ಕನೇ ರಂಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಈಗಿನ ಕಾಲಘಟ್ಟದಲ್ಲಿ ಮಾಧ್ಯಮಗಳು ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ವಿಸ್ತಾರ ಚಾನೆಲ್ ಗಮನಹರಿಸಿ ಒಳ್ಳೆಯ ಜನಪರ ಸುದ್ದಿ ಮಾಧ್ಯಮವಾಗಿ ಬೆಳೆಯಲಿ ಎಂದು ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.


ರಿಪ್ಪನ್‌ಪೇಟೆಯ ಆಶ್ರಿತಾ ಸಭಾಭವನದಲ್ಲಿ ‘ವಿಸ್ತಾರ ವಾಹಿನಿ ಕನ್ನಡ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದಲಾದ ದಿನಮಾನಗಳಲ್ಲಿ ಎಲ್ಲ ಕ್ಷೇತ್ರಗಳು ಕಲುಷಿತಗೊಂಡಿದೆ. ಎನ್ನುವ ಚರ್ಚೆ ಇದೆ. ಇಂತಹ ಸವಾಲುಗಳ ಮಧ್ಯೆಯೂ ವಿಸ್ತಾರ ವಾಹಿನಿ ಲೋಕಾರ್ಪಣೆಗೊಂಡಿರುವುದು ನನಗೆ ವೈಯಕ್ತಿಕವಾಗಿ ಅತೀವ ಸಂತಸ ತಂದಿದೆ ಎಂದು ಈ ಕ್ಷೇತ್ರ ಅಲುಗಿನ ಕತ್ತಿಯಂತಿದ್ದು ಅದನ್ನು ಸಮರ್ಥವಾಗಿ ಎದುರಿಸುವುದರೊಂದಿಗೆ ಉತ್ತುಂಗಕ್ಕೆ ಏರಲಿ ಎಂದರು.


ಸಮಾರಂಭದ ದಿವ್ಯಸಾನಿಧ್ಯವನ್ನು ನಿಟ್ಟೂರು ನಾರಾಯಣ ಗುರು ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಈ ಜಗತ್ತಿಗೆ ದೃಶ್ಯ ಮಾಧ್ಯಮ ಜನರಿಗೆ ಸುಲಭವಾಗಿ ತಲುಪುತ್ತಿದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಮೂಲಕ ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸಬೇಕು. ಸಮಾಜದ ಮೂಲಭೂತ ಸೌಕರ್ಯಗಳ ಕುಂದುಕೊರತೆಗಳ ಬಗ್ಗೆ ಗಮನಹರಿಸುವ ಕೆಲಸ ವಿಸ್ತಾರ ಸುದ್ದಿ ಮಾಧ್ಯಮ ಮಾಡಲಿ ಹಾಗೇಯೆ ವಿಸ್ತಾರ ನ್ಯೂಸ್ ವಿಶ್ವಮಟ್ಟದಲ್ಲಿ ಬೆಳೆಯಲಿ ಎಂದರು.


ಸಮಾರಂಭದಲ್ಲಿ ರಿಪ್ಪನ್‌ಪೇಟೆ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೆ.ರಾವ್, ಹೊಸನಗರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬಿಳಗೋಡು, ಎಎಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಸೂಗೋಡು, ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ. ಲಕ್ಷ್ಮಣ ಗೌಡ, ರೋಟರಿ ಕ್ಲಬ್ ಅಧ್ಯಕ್ಷೆ ಪ್ರಮೀಳಾ ಎಲ್ ಗೌಡ, ಉದ್ಯಮಿ ಆಶ್ರಿತಾ ಸಂತೋಷ, ಕಸಾಪ ಅಧ್ಯಕ್ಷ ತ.ಮ.ನರಸಿಂಹ, ಪುರುಷೋತ್ತಮ ನಿಟ್ಟೂರು, ಪಿಎಸ್‌ಐ ಶಿವಾನಂದಕೋಳಿ, ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್‌ ವತಿಯಿಂದ ಬ್ಯೂರೋ ಮುಖ್ಯಸ್ಥ ವಿವೇಕ್ ಮಹಾಲೆರವರಿಗೆ ಗೌರವಿಸಿ ಸನ್ಮಾನಿಸಲಾಯಿತು.


ವಿಸ್ತಾರ ಬ್ಯೂರೋ ಮುಖ್ಯಸ್ಥ ವಿವೇಕ್ ಮಹಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಕಾವ್ಯ ನಿರೂಪಿಸಿದರು.
ಪುರುಷೋತ್ತಮ್ ಶಾನುಬೋಗ್ ಸ್ವಾಗತಿಸಿ, ಸಬಾಸ್ಟಿನ್ ಮ್ಯಾಥ್ಯೂಸ್ ವಂದಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!