ಪರಸ್ಪರ ಪ್ರೀತಿಸಿ ಬೇರೊಬ್ಬನ ಜೊತೆ ಮದುವೆಯಾದ ಪ್ರೇಯಸಿ ; ಮನನೊಂದು ಪ್ರಿಯತಮೆ ಊರಿಗೆ ತೆರಳಿ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಪ್ರಾಣಬಿಟ್ಟ ಪ್ರಿಯಕರ !

0
994

ಸೊರಬ: ಪರಸ್ಪರ ಪ್ರೀತಿಸಿ ಪೋಷಕರ ಒತ್ತಡಕ್ಕೆ ಮಣಿದು ಕಳೆದೊಂದು ತಿಂಗಳ ಹಿಂದೆ ತವರಿಗೆ ಮರಳಿದ್ದ ಯುವತಿ ಮೇ 20ರಂದು ಮದುವೆಯಾಗಿ ಪ್ರಿಯಕರನಿಂದ ಅಂತರ ಕಾಯ್ದುಕೊಂಡಿದ ಹಿನ್ನೆಲೆಯಲ್ಲಿ ಮನನೊಂದ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ತಾಲೂಕಿನಲ್ಲಿ ವರದಿಯಾಗಿದೆ.

ಘಟನೆ ವಿವರ:

ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಅಸಿಸ್ಟೆಂಟ್ ಕ್ವಾಲಿಟಿ ಮ್ಯಾನೇಜರ್ (ಎಕ್ಯುಎಂ) ಆಗಿ ಕೆಲಸ ಮಾಡಿಕೊಂಡಿದ ದಿಲೀಪ್ (26) ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯವನು. ಅದೇ ಗಾರ್ಮೆಟ್ಸ್‌ನಲ್ಲಿ ಸ್ಯಾಂಪಲ್ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಸೊರಬ ತಾಲೂಕಿನ ಬೆಟ್ಟದಕೂರ್ಲಿಯ ಯುವತಿಯೊಂದಿಗೆ ಪರಸ್ಪರ ಪರಿಯವಾಗಿ ನಂತರ ಅದು ಪ್ರೀತಿ-ಪ್ರೇಮಕ್ಕೆ ತಿರುಗುತ್ತದೆ.

ಲಿಂಗಾಯತ ಸಮಾಜಕ್ಕೆ ಸೇರಿದ ದಿಲೀಪ್ ಮತ್ತು ಮಡಿವಾಳ ಸಮುದಾಯದ ಯುವತಿ (26) ಇಬ್ಬರೂ ಅನ್ಯೋನ್ಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ದಿಲೀಪ್ ಮನೆಯಲ್ಲಿ ಪೋಷಕರು ಈ ಸಂಬಂಧವನ್ನು ಒಪ್ಪದ ಕಾರಣಕ್ಕೆ ಜನವರಿ 02, 2014ರಂದು ದಿಲೀಪ್ ತನ್ನ ಪ್ರೇಯಸಿಗಾಗಿ ಪೋಷಕರೊಂದಿಗೆ ಸಂಬಂಧವನ್ನೇ ಕಡಿಕೊಂಡು ಬರುತ್ತಾನೆ. ಹೀಗೆ ಪ್ರಾಣಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತನ್ನ ಪ್ರೇಯಸಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಿರಲಿ ಎಂದು ದಿಲೀಪ್ ಹಗಲೂ ರಾತ್ರಿಯೆನ್ನದೆ ಕೆಲಸ ಮಾಡಿ ಕೈತುಂಬಾ ಹಣ ಸಂಪಾದಿಸುತ್ತಿದ್ದನಂತೆ. ಆದರೆ, ನಂತರದ ದಿನಗಳಲ್ಲಿ ಯುವತಿಗೆ ಏನಾಯಿತೋ ಗೊತ್ತಿಲ್ಲ ತಾಯಿಗೆ ಅನಾರೋಗ್ಯದ ನೆಪ ಹೇಳಿ ಬೆಂಗಳೂರಿನಿಂದ ತವರಿಗೆ ಬಂದಿದ್ದಾಳೆ. ಅಲ್ಲದೆ, ದಿಲೀಪನೊಂದಿಗ ಅಂತರ ಕಾಯ್ದುಕೊಂಡಿದ್ದಳಂತೆ. ನಂತರ ಯುವತಿಗೆ ಅದೇ ಊರಿನ ಬೇರೊಬ್ಬನೊಂದಿಗೆ ಮದುವೆ ಫಿಕ್ಸ್ ಆಗಿರುವ ವಿಷಯ ತಿಳಿದ ದಿಲೀಪ್ ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿಯುತ್ತದೆ. ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ.

ಆದರೆ, ನಂತರದ ದಿನಗಳಲ್ಲಿ ಯುವತಿಗೆ ಏನಾಯಿತೋ ಗೊತ್ತಿಲ್ಲ ತಾಯಿಗೆ ಅನಾರೋಗ್ಯದ ನೆಪ ಹೇಳಿ ಬೆಂಗಳೂರಿನಿಂದ ತವರಿಗೆ ಬಂದಿದ್ದಾಳೆ. ಅಲ್ಲದೆ, ದಿಲೀಪನೊಂದಿಗ ಅಂತರ ಕಾಯ್ದುಕೊಂಡಿದ್ದಳಂತೆ. ನಂತರ ಯುವತಿಗೆ ಅದೇ ಊರಿನ ಬೇರೊಬ್ಬನೊಂದಿಗೆ ಮದುವೆ ಫಿಕ್ಸ್ ಆಗಿರುವ ವಿಷಯ ತಿಳಿದ ದಿಲೀಪ್ ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿಯುತ್ತದೆ. ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ.

ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಿನ ಸ್ಥಳಿಯರು ಆಕಸ್ಮಿಕವಾಗಿ ದಿಲೀಪ್ ಬಿದ್ದಿರುವುದನ್ನು ನೋಡಿದ್ದಾರೆ. ಪಕ್ಕದ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್‌ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಆತ ಬದುಕುಳಿಯಲಿಲ್ಲ.

ಸದ್ಯ ಯುವಕ ರೆಕಾರ್ಡ್ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here