ಪರಿವರ್ತನೆಯ ಹಾದಿಯಲ್ಲಿ ಭಾರತದ ಪ್ರಜಾಪ್ರಭುತ್ವ ಸಾಗುತ್ತಿದೆ ; ಟಿ.ಡಿ ಮೇಘರಾಜ್

0
256

ರಿಪ್ಪನ್‌ಪೇಟೆ: ಹಿಂದಿನ ಅಟಲ್ ಬಿಹಾರಿ ವಾಜಪೇಯ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ತಿಳಿಸುವಲ್ಲಿ ವಿಫಲವಾದ ಕಾರಣ ಅಧಿಕಾರ ಕಳೆದುಕೊಳ್ಳಬೇಕಾಯಿತು ಆದರೆ ಇಂದಿನ ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರ ಅಭಿವೃದ್ಧಿಯ ಮಾನದಂಡದೊಂದಿಗೆ ಮೌಲ್ಯಯುತ ರಾಜಕೀಯದಿಂದಾಗಿ ಒಬ್ಬ ಶ್ರೀಸಾಮಾನ್ಯ ಮತದಾರ ತನ್ನ ಹಕ್ಕು ಚಲಾವಣೆ ಮಾಡಲು ತಲೆ ಎತ್ತಿ ಎದೆ ಹಿಗ್ಗಿಸಿ ಬಂದು ತನ್ನ ಬೂತ್ ನಲ್ಲಿ ಮತದಾನ ಮಾಡುತ್ತಾನೋ ದೇಶ ಸಂವೃದ್ದಿಯಾಗುತ್ತಾ ಫಲವತ್ತಾಗುತ್ತಿರುವುದಕ್ಕೆ ಭಾರತೀಯ ಜನತಾ ಪಕ್ಷ ಸಂಘಟನ್ಮಾಕ ಅಭಿಮಾನಕ್ಕೆ ಸಾಕ್ಷಿಯಾಗಿ ಪರಿವರ್ತನೆಯ ಹಾದಿಯಲ್ಲಿ ಭಾರತದ ಪ್ರಜಾಪ್ರಭುತ್ವ ಸಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಕಾರ್ಯಕರ್ತರನ್ನು ಹುರುದುಂಬಿಸಿ ಈ ಎಲ್ಲ ಸಾಧನೆಗೆ ಸಾಮಾನ್ಯ ಕಾರ್ಯಕರ್ತರ ಶ್ರಮವೇ ಸಾಕ್ಷಿಯೆಂದು ಬಣ್ಣಿಸಿದರು.

ರಿಪ್ಪನ್‌ಪೇಟೆ ಬಿಜೆಪಿ ಕಛೇರಿಯಲ್ಲಿ ಹುಂಚ-ಕೆರೆಹಳ್ಳಿ ಮಹಾಶಕ್ತಿಕೇಂದ್ರದವರು ಆಯೋಜಿಸಲಾಗಿದ ವಿಸ್ತಾರಕ ಯೋಜನೆಯ ಅವಲೋಕನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಘಟನ್ಮಾಕ ಸಭೆಯನ್ನು ಬೂತ್ ಮಟ್ಟದಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿ ಕಾರ್ಯಕ್ರಮದ ಸದುಪಯೋಗವನ್ನು ಕಾರ್ಯಕರ್ತರು ಮತದಾರರಿಗೆ ಮನನ ಮಾಡಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಸ್ನೇಹಿ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸುವ ಮಹಾತ್ಕಾರ್ಯವನ್ನು ಸಂಘಟನೆಗಳು ಮಾಡಬೇಕು.

ನೋಟಿನ ಮೇಲೆ ಚುನಾವಣೆ ನಡೆಸುವ ವಿರೋಧಿ ಪಕ್ಷಗಳಿಗೆ ಪರ್ಯಾಯವಾಗಿ ಮೈಕ್ರೋ ಮ್ಯಾನೇಜಮೆಂಟ್ ಮೂಲಕ ಸ್ಥಳೀಯವಾಗಿ ಸಣ್ಣ-ಸಣ್ಣ ತಂಡಗಳನ್ನು ರಚಿಸಿ ಅದರ ನಿಖರತೆಯ ಅಧಾರದ ಮೇಲೆ ಸಂಘಟನೆ ಕಟ್ಟಿ ಸಂಘಟನೆಗೆ ಜಯ ತರುತ್ತೇವೆ ಎಂಬ ಸಂಕಲ್ಪದೊಂದಿಗೆ ಈ ರೀತಿಯ ಸಂಘಟನ್ಮಾತಕ ಸಭೆಯನ್ನು ನಡೆಸುತ್ತಿದ್ದೇವೆ ಎಂದರು.

ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿಯನ್ನು ನಿಯಂತ್ರಣ ಮಾಡುವ ಮೂಲಕ ದೇಶದ ಜನರಿಗೆ ಕೊರೊನಾ ಇಂಜೆಕ್ಷನ್ ಕೊಡಿಸುವ ಯಶಸ್ವಿಯಾಗಿ ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಮೋದಿಜೀಯವರಿಗೆ ಸಲ್ಲಬೇಕು ಎಂದರು.

ಈಗಾಗಲೇ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನಂತರದಲ್ಲಿ ಬೋಮ್ಮಾಯಿ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕರ್ತವ್ಯ ನಡೆಸುವ ಮೂಲಕ ಜನಮೆಚ್ಚುಗೆ ಪಡೆಯುವಂತಾಗಿ ಅಭಿವೃದ್ಧಿಯನ್ನು ಪಡಿಸಲಾಗುತ್ತಿರುವುದು ಮತ್ತು ಕ್ಷೇತ್ರದ ಶಾಸಕರು ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ತಲೆ ಎತ್ತಿ ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿ ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷ ಗುರುತಿಸಿ ಅವರನ್ನು ಎಂ.ಎಲ್.ಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಏಕೈಕ ಪಕ್ಷ ಎಂದರೆ ಬಿಜೆಪಿ ಎಂದು ಎದೆ ಉಬ್ಬಿಸಿ ಹೇಳಬಹುದು ಎಂದರು.

ದೇಶಕ್ಕೆ ಮಾದರಿ ಸಂಸದರು:

ಶಿವಮೊಗ್ಗ ಲೋಕಸಭಾ ಸದಸ್ಯ ಸಣ್ಣ ಮಟ್ಟದಿಂದ ಹಿಡಿದು ವಿಮಾನ ನಿಲ್ದಾಣದವರೆಗೂ ಅಭಿವೃದ್ದಿಯಲ್ಲಿ ದೇಶದಲ್ಲಿಯೇ ಮಾದರಿ ಸಂಸದರೆಂಬ ಹೆಗ್ಗಳಿಕೆ ಪಡೆದವರಲ್ಲಿ ಬಿ.ವೈ.ರಾಘವೇಂದ್ರರಾಗಿದ್ದಾರೆಂದ ಅವರು, ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇತ್ತೀಚೆಗೆ ಹೊಸನಗರ ಎಪಿಎಂಸಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಾಗರ ಎಪಿಎಂಸಿಗೆ ಸಂಯೋಜಸುವ ಸರ್ಕಾರದ ನಿರ್ಧಾರವನ್ನು ತಕ್ಷಣ ಸ್ಪಂದಿಸಿ ಹೊಸನಗರದಲ್ಲಿ ಉಳಿಸುವಲ್ಲಿ ಶಾಸಕ ಹರತಾಳು ಹಾಲಪ್ಪನವರನ್ನು ಅಭಿನಂದಿಸಿದರು.

ಹುಂಚ-ಕೆರೆಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಅಧ್ಯಕ್ಷತೆ ವಹಿಸಿದರು.

ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಜಿಲ್ಲಾ ಮುಖಂಡ ಬೆಳ್ಳೂರು ತಿಮ್ಮಪ್ಪ, ಸಂಪನ್ಮೂಲ ವ್ಯಕ್ತಿ ಸಾಗರ ಮಹೇಶ್, ನಾಗಾರ್ಜುನಸ್ವಾಮಿ, ವಿನಯ, ನಾಗೇಂದ್ರಕಲ್ಲೂರು, ಸುಧೀಂದ್ರ ಪೂಜಾರಿ, ದೇವೇಂದ್ರಪ್ಪಗೌಡ ನೆವಟೂರು, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಎಂ.ಸುರೇಶ್‌ಸಿಂಗ್, ಮೆಣಸೆ ಆನಂದ, ಗಿರೀಶ್‌ ಜಂಬಳ್ಳಿ, ತರಕಾರಿ ಯೋಗೇಂದ್ರಪ್ಪಗೌಡ ಇನ್ನಿತರ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಗಿರೀಶ್ ಜಂಬಳ್ಳಿ ಸ್ವಾಗತಿಸಿದರು. ಎಂ.ಬಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here