ಪರಿಸರ ಬೆಳೆಸುವುದರಿಂದ ನಾವೆಲ್ಲರೂ ಸಂರಕ್ಷಣೆಯಿಂದ ಬದುಕಲು ಸಾಧ್ಯ ; ಎನ್.ಆರ್. ದೇವಾನಂದ್

0
182

ಹೊಸನಗರ: ಆಮ್ಲಜನಕ ಪ್ರತಿಯೊಂದು ಜೀವಿಗೂ ಅಗತ್ಯ. ಪರಿಸರ ಬೆಳೆಸುವುದರಿಂದ ಮಾನವ ಜನ್ಮ ಹಾಗೂ ಪ್ರಾಣಿ ಪಕ್ಷಿಗಳು ಸಂರಕ್ಷಣೆಯಿಂದ ಬದುಕಲು ಸಾಧ್ಯ ಎಂದು ಅಂಬೇಡ್ಕರ್ ನಿಗಮದ ನಿರ್ದೆಶಕರಾದ ಎನ್.ಆರ್. ದೇವಾನಂದ್‌ರವರು ಹೇಳಿದರು.

ಹೊಸನಗರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಪಟ್ಟಣ ಪಂಚಾಯಿತ್ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಹುಟ್ಟೂರು ಕರೆಯ ಆವರಣದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಸುಮಾರು 18 ಗಿಡಗಳನ್ನು ನೆಟ್ಟು ಮಾತನಾಡಿದರು.

ಪರಿಸರ ದೆನಾಚರಣೆಯ ಪ್ರಯುಕ್ತ ಗಿಡಗಳನ್ನು ನೆಟ್ಟರೆ ಸಾಲದು ಪ್ರತಿಯೊಬ್ಬರು ಆಗಿಡಗಳನ್ನು ಬೆಳೆಸುವುದು ಹೇಗೆ ಎಂಬುದರಲ್ಲಿ ತೊಡಗಬೇಕು ನಾವು ನೆಟ್ಟ ಗಿಡ ಮರವಾಗಿ ಬೆಳಸಿದರೆ ಮಾತ್ರ ನಾವು ಗಿಡ ನೆಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಹೊಟ್ಟರು ಕೆರೆಯ ಅಭಿವೃದ್ಧಿಯ ಹರಿಕಾರ, ಪಟ್ಟಣ ಪಂಚಾಯಿತಿ ಸದಸ್ಯ ಅಶ್ವಿನಿಕುಮಾರ್ ಮಾತನಾಡಿ, ಈ ಕೆರೆಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮ ವಹಿಸಿದ್ದರಿಂದ ಈ ಕೆರೆಗೆ ಒಂದು ಜೀವ ಬಂದಿದೆ. ಹೊಸನಗರ ಪಟ್ಟಣದ ಜನತೆಗೆ ನೀರೂಣಿಸುವ ಈ ಕೆರೆಯನ್ನು ಈ ಹಿಂದೆ ಹಾಳು ಮಾಡಲಾಗಿದ್ದು ಇಂದು ಇದರ ಅಭಿವೃದ್ಧಿ ಕಾಣುತ್ತಿದೆ ಈ ಅಭಿವೃದ್ಧಿ ಹೊಸನಗರ ಜನತೆಯ ಸಹಕಾರ ಎಂದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರ ಬೇಬಿ ಕೆ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಅರಣ್ಯ ಇಲಾಖೆಯ ಉಪ ಅರಣ್ಯಧಿಕಾರಿ ರಾಘವೇಂದ್ರ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಾಲಗದ್ದೆ ಉಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಪ್ರಶಾಂತ್, ಸದಸ್ಯೆ ಶಾಹಿನ ನಾಸೀರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಸಂಘದ ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿಗಳ ರಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here