ರಿಪ್ಪನ್ಪೇಟೆ: ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಪರಿಶುದ್ದ ನೀರು ಪಡೆಯಲು ಇಂದಿನಿಂದಲೇ ನಾವುಗಳು ಗಿಡಗಳನ್ನು ಹಾಕಿ ಪರಿಸರ ರಕ್ಷಣೆ ಮಾಡುವ ಹೊಣೆ ನಮ್ಮದಾಗಬೇಕು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಮಠದ ಅವರಣದಲ್ಲಿ ಗಿಡನೆಟ್ಟು ನೀರು ಹಾಕುವ ಮೂಲಕ ನಮ್ಮ ಇಂದಿನ ಪೀಳಿಗೆಯವರು ಮನೆಯ ಸುತ್ತಮುತ್ತಲಿನಲ್ಲಿ ಗಿಡಗಳನ್ನು ಬೆಳೆಸುವುದರಿಂದಾಗಿ ಉತ್ತಮ ಗಾಳಿ ಪಡೆಯಲು ಸಾಧ್ಯವೆಂದ ಅವರು, ಮುಂದಿನ ಪೀಳಿಗೆಗೆ ಪರಿಸರದ ಜಾಗೃತಿ ಮೂಡಿಸಲು ಇದೊಂದು ಉತ್ತಮ ಅಭಿಯಾನವಾಗಲಿ ಎಂದರು.
ಹೊಸನಗರದ ಪ್ರಖ್ಯಾತ ವೈದ್ಯ ಡಾ.ಗುರುರಾಜ್ ಮತ್ತು ಭಕ್ತರು, ಗ್ರಾಮಸ್ಥರು ಹಾಜರಿದ್ದರು.
Related