ಪರಿಸರ ಸಂರಕ್ಷಣೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸುಂದರ ಸಮಾಜ ನಿರ್ಮಾಣ ಸಾಧ್ಯ

0
148

ಸೊರಬ : ಪರಿಸರವು ಭೂಮಿಯ ಮೇಲೆ ಜೀವಂತ ಮತ್ತು ನಿರ್ಜೀವ ರೀತಿಯ ಸುತ್ತಮುತ್ತಲಿನ ನೈಜ ಪ್ರಪಂಚವಾಗಿದೆ. ಇದು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಸಹ ಸೂಚಿಸುತ್ತದೆ. ಪರಿಸರದಲ್ಲಿ ಸಸ್ಯಗಳು, ಗಾಳಿ, ನೀರು, ಪ್ರಾಣಿಗಳು, ಮನುಷ್ಯರು ಮತ್ತು ಇತರ ಜೀವಿಗಳು ಅಸ್ತಿತ್ವದಲ್ಲಿವೆ. ಜೀವಂತ ಜೀವಿಗಳು ಪರಿಸರದೊಂದಿಗೆ ಬಲವಾಗಿ ಸಂಪರ್ಕ ಹೊಂದಿದೆ ಹಾಗೂ ಈ ಒಂದು ಸಂಪರ್ಕವನ್ನು ಉಳಿಸುವಲ್ಲಿ ನಾವುಗಳು ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸಬೇಕೆಂದು ಉಪವಲಯ ಅರಣ್ಯಾಧಿಕಾರಿ ಹನುಮಂತಪ್ಪ ಎನ್.ಯು ಹೇಳಿದರು.

ಚಂದ್ರಗುತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾನುವಾರದಂದು ಸಸಿ ಮತ್ತು ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸುಂದರ ಸಮಾಜವನ್ನು ನಿರ್ಮಾಣ ಮಾಡಬಹುದು. ಆರೋಗ್ಯಕರ ವಾತಾವರಣ ನಿರ್ಮಿಸಲು ಜನರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳಾದ ಡಾ. ಶಕುಂತಲಾ ಬಾಯಿ, ಹಿರಿಯ ಮಹಿಳಾ ಆರೋಗ್ಯ ಸಂದರ್ಶಕರಾದ ಮಲ್ಲಮ್ಮ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಯಶವಂತ್ ಮರಾಠಿ, ರಾಘು ಬನವಾಸಿ, ಅರಣ್ಯ ವೀಕ್ಷಕರಾದ ಪ್ರಶಾಂತ್, ಸತೀಶ್, ಡಾಕಪ್ಪ, ಚಿದಾನಂದ ಸೇರಿದಂತೆ ಮತ್ತಿತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here