ಶೃಂಗೇರಿ: ಪದವಿ ಪರೀಕ್ಷೆಗಳ ಶುಲ್ಕ ಹೆಚ್ಚಳವನ್ನು ಖಂಡಿಸಿ ಎಬಿವಿಪಿ ತಾಲ್ಲೂಕು ಸಂಚಾಲಕ ಸುಬ್ರಹ್ಮಣ್ಯರವರ ನೇತೃತ್ವದಲ್ಲಿ ಇಂದು ಬಾಳಗಡಿ ಪ್ರಥಮ ದರ್ಜೆ ಕಾಲೇಜಿನಿಂದ ತಾಲ್ಲೂಕು ಕಛೇರಿಯವರೆಗೂ ಎಬಿವಿಪಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಬಿ.ಎ, ಬಿಎಸ್ಸಿ ಪದವಿ ಪರೀಕ್ಷಾ ಶುಲ್ಕ ರೂ. 300ರವರೆಗೂ ಬಿ.ಕಾಂ, ಬಿಬಿಎ, ಬಿಸಿಎ ಪದವಿ ಪರೀಕ್ಷೆಗಳ ಶುಲ್ಕವನ್ನು ರೂ. 800ರವರೆಗೂ ಹೆಚ್ಚಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಕೂಡಲೇ ಶುಲ್ಕ ಹೆಚ್ಚಳ ಆದೇಶವನ್ನು ಹಿಂಪಡೆಯಬೇಕು. ಕೆಲವು ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ದೊರಕದೆ ಇರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೂಡಲೇ ಇದರ ಬಗ್ಗೆ ಕ್ರಮವಹಿಸಿ ಎಂದು ಆಗ್ರಹಿಸಿ ಮನವಿ ಪತ್ರವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಿಗೆ ಸಲ್ಲಿಸಲಾಯಿತು.
Related