ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದರ ಜೊತೆಗೆ ನಮ್ಮ ದೇಶದ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ

0
111

ತೀರ್ಥಹಳ್ಳಿ: ಪರೀಕ್ಷೆಯಲ್ಲಿ ಹಗಲಿರುಳು ಶ್ರಮಪಟ್ಟು ಶೇ. 100 ಅಂಕ ಗಳಿಸುವುದರ ಜೊತೆಗೆ ನಮ್ಮ ಜನ್ಮ ಭೂಮಿ ಭಾರತ ದೇಶ ಕಟ್ಟಿದ ಮಹನೀಯರ ಚರಿತ್ರೆಗಳನ್ನು ಓದಿ ಕಲಿತು ಅವರಂತೆ ರಾಷ್ಟ್ರ ಭಕ್ತರಾಗಿ ಹೊರ ಹೊಮ್ಮಿ ಎಂದು ಗೃಹ ಸಚಿವರು ತಿಳಿಸಿದರು.

ಶುಕ್ರವಾರ ಬಿಳಲುಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ 08ನೇ ಬಾರಿಯ 100 ಶೇ. ಫಲಿತಾಂಶದ ವಿದ್ಯಾರ್ಥಿಗಳಿಗೆ ವೇತನ ನೀಡಿ ಸಮಾರಂಭ ಕುರಿತು ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ನನಗೆ ಬಿಳಲುಕೊಪ್ಪ ಪ್ರೌಢಶಾಲೆ ಎಂದರೆ ನನಗೆ ತುಂಬಾ ಅಚ್ಚುಮೆಚ್ಚು ಇಲ್ಲಿ ಪ್ರೌಢಶಾಲೆ ಪ್ರಾರಂಭಿಸಲು ಊರಿನ ಅನೇಕರು ವಿಶೇಷ ಪರಿಶ್ರಮ ಹಾಕಿದ್ದರು. ನಾನು ಹಿಂದಿನ ಅವಧಿಯಲ್ಲಿ ಇಲ್ಲಿಗೆ ಪ್ರೌಢಶಾಲೆ ಮಂಜೂರು ಮಾಡಿಸಿದ್ದೆ. ಆದರೆ ನಾನು ಸೋತ ಹತ್ತು ವರ್ಷಗಳ ಅವಧಿಯಲ್ಲಿ ಈ ಶಾಲೆ ಕುಂಠಿತಗೊಂಡಿತು. ಈಗ ನಾನು ಪುನಃ ಶಾಸಕನಾದ ನಂತರ ಈ ಶಾಲೆಗೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತಾ ಬಂದಿದ್ದೇನೆ. ಇಲ್ಲಿನ ಶಿಕ್ಷಕರ ಹಗಲಿರುಳಿನ ಪಾಠ ಪ್ರವಚನಗಳ ಬಗ್ಗೆ ನನಗೆ ಹಮ್ಮೆ ಅನಿಸುತ್ತದೆ.

ಕಳೆದ ವರ್ಷದಿಂದ ಪ್ರತಿ ವರ್ಷ 100ಕ್ಕೆ 100 ಫಲಿತಾಂಶ ನೀಡುವ ಕಾರ್ಯದಲ್ಲಿ ಶಿಕ್ಷಕರು ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಫಲಿತಾಂಶದ ರೂವಾರಿಗಳಾದ ಎಲ್ಲಾ ಮಕ್ಕಳನ್ನು ಪ್ರೋತ್ಸಾಹ ಧನ ನೀಡಿ ಗೌರವಿಸುವ ಮಹಾತ್ಕಾರ್ಯ ಬೇರೆ ಯಾವುದೇ ಶಾಲೆಯಲ್ಲಿ ಆಗುತ್ತಿಲ್ಲ. ಗಂಟೆಹಕ್ಕಲು ರತ್ನಾಕರ ತಾಲೂಕು ಪಂಚಾಯತಿ ಸದಸ್ಯೆ ಗೀತಾ ಶೆಟ್ಟಿ ಇನ್ನಿತರರ ಸಹಕಾರದಿಂದ ಈ ಪ್ರೌಢಶಾಲೆ ರಾಜ್ಯಕ್ಕೆ ಮಾದರಿಯಾಗಿ ಹೊರ ಹೊಮ್ಮಲಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಾಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಾಗೇಶ್‌ರವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಮಾಜಿ ಸದಸ್ಯೆ ಗೀತಾ ಸದಾನಂದ ಶೆಟ್ಟಿ, ಕೆಬಿ ಮೋಹನ್, ಛಾಯಾ ಅಶೋಕ್, ಸಂತೋಷ್, ವಿನುತಾ, ಅಭಿಲಾಷ್, ಸಚಿನ್, ಸಂಧ್ಯಾ, ಪಿಡಿಒ ಚಂದ್ರಶೇಖರ, ಶಿಕ್ಷಕರು, ಪೋಷಕರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ರಶ್ಮಿ ಶ್ರೀಕಾಂತ್ ನಾಯಕ್
ಜಾಹಿರಾತು

LEAVE A REPLY

Please enter your comment!
Please enter your name here