ಹೊಸನಗರ: ಶಿರಸಿ ನಿವಾಸಿ ದಯಾನಂದ್ ಹೆಗಡೆ ಎಂಬುವವರು ಭಾನುವಾರ ಸಂಜೆ ಪಟ್ಟಣದ ಸ್ಟೇಟ್ ಬ್ಯಾಂಕ್ ಎಟಿಎಂ ಮುಂಭಾಗ ತಮ್ಮ ನಗದು ಹಾಗೂ ಅಮೂಲ್ಯ ದಾಖಲೆಗಳನ್ನು ಇಟ್ಟಿದ್ದ ಪರ್ಸ್ ಅನ್ನು ಕಳೆದುಕೊಂಡಿದ್ದು ಅದು ಹೊಸನಗರದ ನಿವಾಸಿಗಳಾದ ಮದನ್, ಸುರೇಶ್ ಮತ್ತು ನಿಶ್ಚಿತ್ ಎಂಬುವರಿಗೆ ಸಿಕ್ಕಿದ್ದು ಕೂಡಲೇ ಅವರು ಅದನ್ನು ಪೊಲೀಸ್ ಇಲಾಖೆಗೆ ತಲುಪಿಸಿ ಆ ಪರ್ಸ್ ನಲ್ಲಿದ್ದ ದಾಖಲೆ ಸಹಾಯದಿಂದ ಅದರ ಮಾಲೀಕರನ್ನು ಪತ್ತೆಹಚ್ಚಿ ಅದನ್ನು ಅವರಿಗೆ ತಲುಪಿಸಿದ್ದಾರೆ.
ಈ ಯುವಕರ ಪ್ರಾಮಾಣಿಕತೆಗೆ ಪರ್ಸ್ ಮಾಲಿಕ ದಯಾನಂದ್ ಹೆಗಡೆ ಹಾಗೂ ಪೊಲೀಸ್ ಇಲಾಖೆ ಧನ್ಯವಾದಗಳನ್ನು ತಿಳಿಸಿದೆ.
Related