ಪವರ್ ಸ್ಟಾರ್ ‘ಪುನೀತ್ ರಾಜ್‍ಕುಮಾರ್’ ಫೋಟೋ ಇರುವ ಫ್ಲೆಕ್ಸ್ ಹರಿದ ವ್ಯಕ್ತಿ ಕಥೆ ಏನಾಯ್ತು ಗೊತ್ತಾ?

0
1174

ಚಿಕ್ಕಮಗಳೂರು: ನಟ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲವಾದರೂ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಅವರೇ ‘ರಾಜಕುಮಾರ’. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ.

ಅಪ್ಪುಗಾಗಿ ಅವರ ಮನ ಮಿಡಿಯುತ್ತಲೇ ಇದೆ, ಅವರಿಗಾಗಿ ಕಂಬನಿ ಸುರಿಸುತ್ತಲೇ ಇದ್ದಾರೆ. ‘ಮತ್ತೆ ಹುಟ್ಟಿ ಬನ್ನಿ ಅಪ್ಪು’, ‘ನಗುವಿನ ದೇವರು ಪುನೀತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಬರಹದೊಂದಿಗೆ ಅಪ್ಪು ಅವರ ಭಾವಚಿತ್ರವುಳ್ಳ ಬ್ಯಾನರ್ ಗಳನ್ನು ಪುನೀತ್ ಅಭಿಮಾನಿಗಳು ಊರು ತುಂಬೆಲ್ಲಾ ಹಾಕಿ, ಅವರಿಗೆ ನಮಿಸುತ್ತಲೇ ಇದ್ದಾರೆ. ಕನ್ನಡಿಗರಿಗೆ ಅಪ್ಪು ಮೇಲಿರುವ ಭಾವನಾತ್ಮಕ ಸಂಬಂಧವನ್ನ ಹೇಳಲು ಪದಗಳೇ ಸಾಲುವುದಿಲ್ಲ. ಆದರೆ, ಇಲ್ಲೊಬ್ಬ ದುಷ್ಕರ್ಮಿ ಅಪ್ಪು ಫ್ಲೆಕ್ಸ್ ಹರಿದು ವಿಕೃತಿ ಮೆರೆದಿದ್ದಾನೆ.

ಅಪ್ಪು ಫೋಟೋವಿರುವ ಫ್ಲೆಕ್ಸ್ ನಗರದ ಮಾರ್ಕೆಟ್ ರಸ್ತೆಯಲ್ಲಿ ಹಾಕಲಾಗಿತ್ತು, ಇದನ್ನು ದುಷ್ಕರ್ಮಿ ಹರಿದಿದ್ದಾನೆ. ಪುನೀತ್ ಫ್ಲೆಕ್ಸ್ ಹರಿಯುತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಹಿಡಿದ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಹರಿದ ಬ್ಯಾನರ್ ಅನ್ನು ಆತನ ಮೇಲೆ ಹಾಕಿ ಚಿಕ್ಕಮಗಳೂರು ನಗರ ಠಾಣೆಗೆ ಕರೆತಂದು ಪೊಲೀಸರಿಗೊಪ್ಪಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here