ಪಶುವೈದ್ಯ ದಂಪತಿಗೆ ಬಂಗಾರದ ಪದಕ

0
354

ಶಿವಮೊಗ್ಗ:‌ ದಿನಾಂಕ: 28-4-2022 ರಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರದ ಪಟಿಕೋತ್ಸವದಲ್ಲಿ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಪಶುವೈದ್ಯ ಡಾ. ಸಿ.ಎಲ್.ಮಣಿಕಾಂತ್ ಮತ್ತು ಅವರ ಪತ್ನಿ ಡಾ. ಪವಿತ್ರಾ ಇವರಿಗೆ ಎಂವಿಎಸ್‍ಸಿ ಸ್ನಾತಕೋತ್ತರ ಶಿಕ್ಷಣದಲ್ಲಿ ಅತ್ಯಂತ ಹೆಚ್ಚುವರಿ ಅಂಕ ಪಡೆದಿರುವುದಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಚಿನ್ನದ ಪದಕ ಪ್ರದಾನ ಮಾಡಿದರು.

ಡಾ. ಮಣಿಕಾಂತ್ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಮತ್ತು ಡಾ: ಪವಿತ್ರಾ ಪಶುವೈದ್ಯಕೀಯ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುತ್ತಾರೆ. ಸದ್ಯ ಚಿಕ್ಕಮಗಳೂರಿನ ಹಳ್ಳಿಗಾಡು ಭಾಗದಲ್ಲಿ ಜನಪ್ರಿಯ ಪಶುವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಈ ಪಶುವೈದ್ಯ ದಂಪತಿ ಪಶುಸೇವೆಯಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ. ಸ್ನಾತಕೋತ್ತರ ಸಂಶೋಧನಾ ಸಮಯದಲ್ಲಿ ಪಡೆದ ಪರಿಣತೆಯನ್ನು ಮತ್ತು ಕಲಿತ ವಿದ್ಯೆಯನ್ನು ಕ್ಷೇತ್ರ ಮಟ್ಟದಲ್ಲಿ ಕಾರ್ಯಗೊಳಿಸುತ್ತಿರುವುದು ಇವರ ಹೆಮ್ಮೆಯ ಕಾರ್ಯವಾಗಿದೆ. ಪಶುಚಿಕಿತ್ಸಾಲಯದಲ್ಲಿ ಜಾನುವಾರು ಅಂಗಗಳ ವಸ್ತುಸಂಗ್ರಹಾಲಯ ಮತ್ತು ಪ್ರಯೋಗಾಲಯ ಸ್ಥಾಪಿಸಿ ಗೋಪಾಲಕರಿಗೆ ಜ್ಞಾನ ಮತ್ತು ಸೇವೆ ನೀಡುತ್ತಿರುವುದು ಇವರ ವಿಶೇಷತೆ. ಸದಾ ನೂತನ ವಿಷಯಗಳನ್ನು ಹಾಗೂ ಹೊಸ ಆವಿಷ್ಕಾರಗಳನ್ನು ಗ್ರಾಮೀಣ ರೈತರಿಗೆ ತಲುಪಿಸುವ ಕಾಯಕದಲ್ಲಿ ಇವರು ತೊಡಗಿರುವುದು ಇವರ ಕಾರ್ಯ ಚಟುವಟಿಕೆ ಸೂಚಿಸುತ್ತದೆ.

ಸ್ನಾತಕೋತ್ತರ ಅಧ್ಯಯನದ ಸಮಯದಲ್ಲಿಯೂ ಸಹ ಈ ದಂಪತಿಗಳು ದಕ್ಷವಾಗಿ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಸಂಶೋಧನೆ ಮಾಡಿದ್ದು, ಸದಾ ಚಿಂತನಶೀಲರಾಗಿದ್ದರು ಎನ್ನುತ್ತಾ ಇವರಿಬ್ಬರಿಗೆ ಶುಭ ಕೋರಿದ್ದಾರೆ. ಇವರ ಮಾರ್ಗದರ್ಶಕರಾದ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ|| ಎನ್.ಬಿ.ಶ್ರೀಧರ.

ಜಾಹಿರಾತು

LEAVE A REPLY

Please enter your comment!
Please enter your name here