ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರ ಪ್ರವಾಸ

0
215

ಚಿಕ್ಕಮಗಳೂರು: ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಏ. 19 ಮತ್ತು 20ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಏ. 19 ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರಿಗೆ ಆಗಮಿಸುವ ಅಧ್ಯಕ್ಷರು ಬೆ. 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಲಿದ್ದಾರೆ.

ಏ. 20 ರಂದು ಬೆ. 9 ಗಂಟೆಗೆ ಕುದುರೆಮುಖ ಸಮೀಪದ ತುಂಗಾ ಭದ್ರಾ ಗಂಗಾಮೂಲ, ಪಾತಾಳ ಮಂಗಳ ಸ್ಥಳಕ್ಕೆ ಭೇಟಿ ನೀಡಿ ನದಿಮೂಲ ಸಂರಕ್ಷಣಾ ಜಾಗೃತ ಕಾರ್ಯಕ್ರಮದ ಕುರಿತು ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬೆ. 11 ಗಂಟೆಗೆ ಕೆರೆಕಟ್ಟೆಯಲ್ಲಿ ಅಧಿಕಾರಿಗಳೊಂದಿಗೆ ಕುಂದು ಕೊರತೆ ಸಭೆ ನಡೆಸುವರು. ನಂತರ ಮಧ್ಯಾಹ್ನ 1 ಗಂಟೆಗೆ ಶೃಂಗೇರಿಯಲ್ಲಿ ಶಾರದಾಂಬಾ ದೇವಿ ದರ್ಶನ ಪಡೆದು, ಸಂಜೆ 4 ಗಂಟೆಗೆ ಶೃಂಗೇರಿಯಿಂದ ಮಡಿಕೇರಿಗೆ ನಿರ್ಗಮಿಸಲಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here