20.6 C
Shimoga
Friday, December 9, 2022

ಪಾರ್ಶ್ವವಾಯು ರೋಗದ ಜನಜಾಗೃತಿ ಅಭಿಯಾನ

ರಿಪ್ಪನ್‌ಪೇಟೆ: ಪ್ರಪಥಮವಾಗಿ ಫಸ್ಟ್ ನ್ಯೂರೋ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಸಂಸ್ಥೆ ಅಯೋಜಿಸಿರುವ ಜಾಗೃತಿ ಅಭಿಯಾನ ಇದೊಂದು ಉತ್ತಮ ಸೇವೆಯಾಗಿದೆ. ಗ್ರಾಮೀಣ ಪ್ರದೇಶದವರು ದೂರದ ಪಟ್ಟಣಗಳಿಗೆ ತೆರಳಿ ತಮ್ಮ ಅರೋಗ್ಯದ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟಕರವಾಗಿರುವ ಇಂದಿನ ಸಂದರ್ಭದಲ್ಲಿ ಮನೆಬಾಗಿಲಿಗೆ ಬಂದು ಬಿಪಿ ಶುಗರ್ ಇನ್ನಿತರ ರಕ್ತ ಪರೀಕ್ಷೆಯನ್ನು ಮಾಡುವುದರೊಂದಿಗೆ ಜಾಗೃತಿ ಮೂಡಿಸುತ್ತಿರುವುದರ ಬಗ್ಗೆ ಪಾರ್ಶ್ವವಾಯು ಪೀಡಿತ ರೋಗಿ ಬಿ.ಕೆ.ಹರೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.


ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಮಂಗಳೂರು ನ್ಯೂರೋ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಆಸ್ಪತ್ರೆ ವತಿಯಿಂದ ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದಿಂದಾಗಿ ಜನರಲ್ಲಿ ಪಾರ್ಶ್ವವಾಯು ರೋಗ ಬರುವ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡುವುದರ ಜೊತೆಗೆ ತಕ್ಷಣ ಲಭ್ಯವಿರುವ ಚಿಕಿತ್ಸೆಗಳ ಮಾಹಿತಿ ನೀಡಿ ಈ ರೋಗ ಕಾಣಿಸಿಕೊಂಡ ತಕ್ಷಣದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ದೇಹದ ಅಂಗಾಂಗಳು ಜೀವನ ಪೂರ್ತಿ ಊನವಾಗುವ ಸಂಭವ ಹೆಚ್ಚು ಇರುತ್ತವೆ ಈ ನಿಟ್ಟಿನಲ್ಲಿ ನ್ಯೂರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರು ಈ ರೋಗ ಪೀಡಿತ ರೋಗಿ ನಾಲ್ಕೈದು ಗಂಟೆಯ ಒಳಗೆ ಅಸ್ಪತ್ರೆಗೆ ಬಂದರೆ ಯಾವುದೇ ಅಂಗಾಂಗಗಳು ಊನವಾಗದಂತೆ ಚಿಕಿತ್ಸೆ ನೀಡಲಾಗುವುದರೊಂದಿಗೆ ರೋಗಿ ಗುಣಮುಖನಾಗಲು ಸಾಧ್ಯವಾಗುವುದು ಎಂದು ಆಸ್ಪತ್ರೆಯ ಪಿಅರ್‌ಓ ಸಂಪತ್‌ಕುಮಾರ್ ವಿವರಿಸಿದರು.


ಈಗಾಗಲೇ ಕರ್ನಾಟಕ ರಾಜ್ಯದ ದಕ್ಷಿಣಕನ್ನಡ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕರ್ನಾಟಕ ಜಿಲ್ಲೆ ಸಹಿತ ಕೇರಳ ರಾಜ್ಯದ ಕಾಸರಗೋಡು ಕಣ್ಣೂರು ವ್ಯಾಪ್ತಿಯಲ್ಲಿ ಅಭಿಯಾನದ ಮೂಲಕ ಸಾಕಷ್ಟು ಜನಸಂಖ್ಯೆಯನ್ನು ತಲುಪಿದ್ದೇವೆ ಎಂದರು.


ಈ ನ್ಯೂರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಸ್ಥಳದಲ್ಲಿ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.


ನ್ಯೂರೋ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯ ಸಿಬ್ಬಂದಿಗಳಾದ ಪ್ರದೀಪ್ ಜೆಬಿ,ಅರುಣ್‌ಗೌಡ ಇನ್ನಿತರರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!