ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳು ಬಲಿ !

0
318

ಶಿವಮೊಗ್ಗ: ಘನ ತ್ಯಾಜ್ಯ ವಿಲೇವಾರಿಯಲ್ಲಿ ಶಿವಮೊಗ್ಗ‌ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳು ಬಲಿಯಾಗಿವೆ.

ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಬದಲು ಚಾನಲ್ ಪಕ್ಕದ ಖಾಲಿ ಜಾಗದಲ್ಲಿ ವಾಹನ ಚಾಲಕರು ಹಾಕಿದ್ದಾರೆ. ನಗರ ಸಮೀಪದ ಅನುಪಿನಕಟ್ಟೆ ಬಳಿ ಇರುವ ತುಂಗಾ ಎಡದಂಡೆ ಕಾಲುವೆಯ ಅಕ್ಕಪಕ್ಕದ ಖಾಲಿ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಪಾಲಿಕೆಯ ಕೆಲ ವಾಹನ ಚಾಲಕರ ನಿರ್ಲಕ್ಷ್ಯದಿಂದಾಗಿ ಘನತ್ಯಾಜ್ಯ, ಕಟ್ಟಡ ನಿರ್ಮಾಣದ ವೇಸ್ಟ್, ಕಲ್ಯಾಣ ಮಂಟಪದ ಘನ ತ್ಯಾಜ್ಯವನ್ನು ತಂದು ರಸ್ತೆ ಬದಿಯಲ್ಲಿಯೇ ಹಾಕಿದ್ದು, ರಸ್ತೆ ಬದಿಯಲ್ಲಿ ಸುರಿದ ಈ ತ್ಯಾಜ್ಯ ತಿಂದು ಅನುಪಿನಕಟ್ಟೆ ಗ್ರಾಮದ ಜಾನುವಾರುಗಳು ಸಾವು ಕಂಡಿವೆ.

ಕಳೆದ ಎರಡು ದಿನದಲ್ಲಿ 5 ಕ್ಕೂ ಹೆಚ್ಚು ಜಾನುವಾರುಗಳು‌ ಸಾವು. ಅನುಪಿನ ಕಟ್ಟೆ ಗ್ರಾಮದ ಚಿತ್ರಾ ಪ್ರಕಾಶ್, ರತ್ನಮ್ಮ‌ ಬೋರೆಗೌಡ ಸೇರಿದಂತೆ ಹಲವರ ಮನೆಯ ಜಾನುವಾರು ಸಾವು ಕಂಡಿದ್ದು, ಪಾಲಿಕೆ ನಿರ್ಲಕ್ಷ್ಯಕ್ಕೆ ಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘನತ್ಯಾಜ್ಯವನ್ನು ಸಮಪರ್ಕವಾಗಿ ವಿಲೇವಾರಿ ಮಾಡುವಂತೆ ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here