ಪಿಕಾರ್ಡ್ ಬ್ಯಾಂಕಿನಿಂದ ರೈತರು ಪಡೆದ ಸಾಲದ ಹಣ ಹಾಗೂ ಬಡ್ಡಿಕಟ್ಟಿ ಬ್ಯಾಂಕಿನ ಏಳಿಗೆಗೆ ಸಹಕರಿಸಿ: ಎಂ.ವಿ. ಜಯರಾಮ್

0
660

ಹೊಸನಗರ: ಹೊಸನಗರ ಪ್ರಾಥಮಿಕ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಪಡೆದ ಸಾಲದ ರೂಪದ ಕಂತಿನ ಹಣವನ್ನು ಸಾಲ ಹಾಗೂ ಬಡ್ಡಿಯನ್ನು ಮಾರ್ಚ್ 31ರ ಒಳಗೆ ಜಮಾ ಮಾಡಿ ಬ್ಯಾಂಕಿನ ಏಳಿಗೆಗೆ ಸಹಕರಿಸಬೇಕೆಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಎಂ.ವಿ. ಜಯರಾಮ್‌ರವರು ಹೇಳಿದರು.

ಅವರು ಇಂದು ಹೊಸನಗರದ ಚೌಡಮ್ಮ ರಸ್ತೆಯಲ್ಲಿರುವ ಭೂ ಅಭಿವೃದ್ಧಿ ಗ್ರಾಮೀಣ ಬ್ಯಾಂಕ್ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ರೈತರಲ್ಲಿ ಮನವಿ ಮಾಡಿದರು.

2020ರಲ್ಲಿ 950 ಜನ ರೈತ ಸದಸ್ಯರು 2ಕೋಟಿ 79 ಲಕ್ಷವನ್ನು ನಮ್ಮ ಬ್ಯಾಂಕಿನಿಂದ ಸಾಲ ಪಡೆದಿದ್ದರು ಅದರಲ್ಲಿ 2021ರ ಮಾರ್ಚ್ ಅಂತ್ಯಕ್ಕೆ ಬಡ್ಡಿ ಮನ್ನಾ ಯೋಜನೆಯಲ್ಲಿ 238 ಜನ ಸದಸ್ಯರು 53 ಲಕ್ಷ ಸ ಹಣವನ್ನು ಬ್ಯಾಂಕಿಗೆ ಜಮಾ ಮಾಡಿ ಸರ್ಕಾರದ ಸವಲತ್ತು ಪಡೆದಿದ್ದಾರೆ‌. ನಂತರ ದೇಶದಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ಸರ್ಕಾರಗಳು ಈ ಸವಲತ್ತನ್ನು ಜೂನ್ ಅಂತ್ಯದವರೆವಿಗೆ ವಿಸ್ತರಿಸಿದಾಗ ಒಟ್ಟು 368 ಸದಸ್ಯರು 1ಕೋಟಿ 74 ಲಕ್ಷ ಹಣವನ್ನು ಬ್ಯಾಂಕಿಗೆ ಜಮಾ ಮಾಡಿದ್ದಾರೆ. 600 ಜನ ಸದಸ್ಯರು ಬಡ್ಡಿ ಮನ್ನಾ ಯೋಜನೆಯಿಂದ ವಂಚಿತರಾಗಿದ್ದಾರೆ. ಅವರು ಬಡ್ಡಿ ಸಹಿತವಾಗಿ ಮಾರ್ಚ್ ಅಂತ್ಯದ ಒಳಗೆ ಜಮಾ ಮಾಡಬೇಕು ಎಂದರು.

ಈ ವರ್ಷ ಅಂದರೆ ಮಾರ್ಚ್ 2021ರಲ್ಲಿ ಚಾಲ್ತಿ ಖಾತೆದಾರರು ಸಾಲವನ್ನು ಪಡೆದ ರೈತರು ಅಂಚೆ ಮೂಲಕ ಈಗಾಗಲೇ ಈಗಾಗಲೇ ತಿಳಿಸಿಲಾಗಿದ್ದು, ನಮ್ಮ ಬ್ಯಾಂಕಿನ ಸಿಬ್ಬಂದಿಗಳು ಸಾಲ ಸೌಲಭ್ಯ ಪಡೆದ ಸದಸ್ಯರ ಮನೆಗಳಿಗೆ ಭೇಟಿ ನೀಡಲಾಗಿದ್ದು ಅಂಚೆ ಚೀಟಿ ತಲುಪದವರಿಗೆ ಈ ಮೂಲಕ ತಿಳಿಸಲಾಗುತ್ತಿದ್ದು ಮಾರ್ಚ್ ಅಂತ್ಯದ ಒಳಗೆ ಹಣ ಪಾವತಿಸಿದರೆ ಸಾಲ ಪಡೆದ ಹಣಕ್ಕೆ ಕೇವಲ 3% ಬಡ್ಡಿದರದಲ್ಲಿ ಅಸಲು ಬಡ್ಡಿ ಪಾವತಿಸಬೇಕು ಇಲ್ಲವಾದರೆ ಸರ್ಕಾರದಿಂದ ಸಿಗುವ 9% ಬಡ್ಡಿಯು ಸೇರಿ ಬ್ಯಾಂಕಿಗೆ ಜಮಾ ಮಾಡಬೇಕಾಗುತ್ತದೆ ಎಂದರು‌.

ಹೊಸನಗರ ಪಿಕಾರ್ಡ್ ಬ್ಯಾಂಕಿಗೆ ಇಂದಿನ ದಿನಾಂಕದವರೆವಿಗೆ 12ಕೋಟಿ 62 ಲಕ್ಷ ರೂ‌. ಕಂತಿನ ಮೂಲಕ ಹಣವನ್ನು ರೈತರಿಂದ ಬರಬೇಕಾಗಿದ್ದು ನಾವು ನಬಾರ್ಡ್’ಗೆ 4ಕೋಟಿ 48ಲಕ್ಷ ಹಣವನ್ನು ಸಂದಾಯ ಮಾಡಬೇಕಾಗಿದೆ. ಈ ವರ್ಷ ರೈತರಿಂದ ಸುಮಾರು 70% ಅಸಲು ಬಡ್ಡಿಯನ್ನು ಮಾರ್ಚ್ ಅಂತ್ಯದ ಒಳಗೆ ವಸೂಲಿ ಮಾಡಿದರೆ ನಮ್ಮ ಬ್ಯಾಂಕ್ಕಿಗೆ ನಬಾರ್ಡ್ ನಿಂದ ಗೌರವ ಸಿಗುವುದರೊಂದಿಗೆ ಮುಂದಿನ ದಿನದಲ್ಲಿ ರೈತರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಲ ನೀಡಲು ಅನುಕೂಲವಾಗುತ್ತದೆ ಅದ್ದರಿಂದ ನಮ್ಮ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದ ಎಲ್ಲ ರೈತರು ಮಾರ್ಚ್ ಅಂತ್ಯದ ಒಳಗೆ ಸಾಲ ಮರುಪಾವತಿ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ಬ್ಯಾಂಕಿನ ಸ್ಥಾಯಿ ಸಮಿತಿ ಸದಸ್ಯರಾದ ಜಬಗೋಡು ಹಾಲಪ್ಪಗೌಡ, ನೌಕರರಾದ ರುಕ್ಮೀಣಿ, ಸುಕುಮಾರ, ನಾಗರತ್ನ, ವಿನಯ್, ಸಂಗೀತಾ, ಶುಭಾ, ರಾಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here