ಪುನೀತ್‌ಗೆ ಮರಣೋತ್ತರ ಪದ್ಮಶ್ರೀ ನೀಡಲಿ: ನೆನಪಿರಲಿ ಪ್ರೇಮ್ ಒತ್ತಾಯ

0
266

ಚಿಕ್ಕಮಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ನಟ ಪುನೀತ್‍ರಾಜ್‍ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಆಗ್ರಹಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್‍ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂಬುದು ನಾನು ಬಯಸುತ್ತೇನೆ. ಸರ್ಕಾರ ಸಾಧ್ಯವಾದಷ್ಟು ಬೇಗ ಪ್ರಶಸ್ತಿ ನೀಡಲಿ ಎಂದು ಆಗ್ರಹಿಸಿದರು.

50-60ವರ್ಷ ಮೇಲ್ಪಟ್ಟವರು ಜೀಮ್‍ಗಳಲ್ಲಿ ಕಸರತ್ತು ನಡೆಸುವುದನ್ನು ಸ್ವಲ್ಪ ಕಡಿಮೆ ಮಾಡಲಿ, ಭಾರ ಎತ್ತುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಜೀಮ್ ಮಾಡಬೇಕೆಂಬ ಆಸೆ ಇದ್ದರೇ ಉತ್ತಮ ಟ್ರೇನರ್‍ ಗಳಿಂದ ಮಾರ್ಗದರ್ಶನ ಪಡೆದುಕೊಳ್ಳಲ್ಲಿ ಎಂದರು.

ಚಲನಚಿತ್ರ ನಟರು ದೇಹ ಸೌಂದರ್ಯ ಹೊಂದಬೇಕಾದರೆ ಜಿಮ್ ಮಾಡಲೇಬೇಕು. ಇಲ್ಲವೇ ಬೇರೆ ಆಕ್ಟೀವಿಟಿ ಇರಬೇಕು. 50ವರ್ಷ ಬಳಿಕ ಎಚ್ಚರದಿಂದಿರಲಿ ಎಂದು ಸಲಹೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here