ಪುನೀತ್ ರಾಜ್‍ಕುಮಾರ್ ಅವರ ಹೆಸರು ಜನರ ಮನದಲ್ಲಿ ಅಜಾರಾಮರ: ಬಿ. ಸ್ವಾಮಿರಾವ್

0
1043

ರಿಪ್ಪನ್‌ಪೇಟೆ: ಅನೇಕ ನಟರು ಪಟ್ಟಣ ಪ್ರದೇಶದಲ್ಲಿ ಮಾತ್ರ ಜನಪ್ರಿಯರಾಗುತ್ತಾರೆ ಅದರೆ ಪುನೀತ್ ರಾಜ್‍ಕುಮಾರ್ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಮಾನಸದಲ್ಲಿ ಅಚ್ಚಳಿಯದ ಜನಪ್ರಿಯ ನಟರಾಗಿ ಎಲೆಮರೆಯ ಸೇವೆ ಅವರನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ ಅವರ ಅದರ್ಶ ಸುಸಂಸ್ಕೃತ ಸಂಸ್ಕಾರಯುವತ ಬದುಕು ಇನ್ನೊಬ್ಬರಿಗೆ ಆದರ್ಶವಾಗುವ ಮೂಲಕ ಅಜಾತಶತ್ರು ಪುನೀತ್ ರಾಜ್‍ಕುಮಾರ್ ಅಜಾರಾಮರ ಎಂದು ಹೊಸನಗರದ ಮಾಜಿ ಶಾಸಕ ಬಿ.ಸ್ವಾಮಿರಾವ್ ಮನದಾಳದ ಮಾತಯನ್ನು ಬಣ್ಣಿಸಿದ್ದು ಹೀಗೆ.

ಪುನೀತ್ ರಾಜ್‍ಕುಮಾರ್ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸುವ ಮೂಲಕ ಅವರ ಅಕಾಲಿಕ ನಿಧನ ಕರುನಾಡಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಪುನೀತ್ ಅವರು ಹಲವು ಕನಸುಗಳನ್ನು ಇರಿಸಿಕೊಂಡಿದ್ದರು ಅವರ ಅಕಾಲಿಕ ನಿಧನದಿಂದಾಗಿ ಅವರ ಕನಸು ಅರ್ಧಕ್ಕೆ ನಿಂತಿದೆ. ಅಭಿಮಾನಿಗಳು ಮತ್ತು ಸಂಘಟನೆಗಳು ಪುನೀತ್‌ ಕನಸು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಅಭಿನಂದಾರ್ಹ ಸಂಗತಿ ಎಂದ ಅವರು, ರಾಜ್ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು ಸುಖ-ಕಷ್ಟಗಳಲ್ಲಿ ಎರಡು ಕುಟುಂಬಗಳು ಪಾಲ್ಗೊಂಡು ಹಂಚಿಕೊಂಡ ನೋವು-ನಲಿವನ್ನು ಸವಿಸ್ತಾರವಾಗಿ ವಿವರಿಸಿದರು.

ಅಲ್ಲದೆ ವೀರಪ್ಪನ್ ಅಪಹರಣದ ಸಂದರ್ಭದಲ್ಲಿ ನಾನು ತಲೆ ಮತ್ತು ದಾಡಿಯನ್ನು ಸಂಪೂರ್ಣವಾಗಿ ಬಿಟ್ಟಿದ್ದು ಅವರು ಮರಳಿದ ನಂತರ ಭೇಟಿ ಮಾಡಿ ಮಾತನಾಡಿಸಿ ಅಪಹರಣದಿಂದ ಸುರಕ್ಷಿತವಾಗಿ ಮರಳುವಂತೆ ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಹೊತ್ತಿದ್ದು ಮುಡಿ ಸಮರ್ಪಿಸಿ ವಾಪಾಸ್ಸು ಬಂದು ಪ್ರಸಾದವನ್ನು ಹಂಚಿ ಬಂದಿರುವುದಾಗಿ ವಿವರಿಸಿ, ಪುನೀತ್‌ರಾಜಕುಮಾರ್ ನಿಧನ ಸುದ್ದಿ ತಿಳಿದು ಸಂಪೂರ್ಣವಾಗಿ ವಿಚಲಿತನಾಗಿದ್ದು ಅದರಿಂದ ಹೊರಬರಲಾಗದ ಸ್ಥಿತಿ ನಮ್ಮ ಕುಟುಂಬದಲ್ಲಿ ತುಂಬಿಕೊಂಡಿದೆ. ಪುನೀತ್ ನಿಧನ ಇಂದಿನ ರಾಜಕೀಯ ನಾಯಕರಿಗೆ ಮತ್ತು ಚಿತ್ರರಂಗದವರಿಗೆ ಸೇರಿದಂತೆ ಇತರರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಶ್ಲೇಷಿಸಿದರು.

ಪುನೀತ್‌ರಾಜ್ ಓರ್ವ ಸುಸಂಸ್ಕೃತ ವ್ಯಕ್ತಿತ್ವದ ನಟನಾ ಚತುರ. ಸಂಗೀತ ಗಾಯನದೊಂದಿಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಮೂಲಕ ಕೋಟ್ಯಂತರ ಮಕ್ಕಳ ಮತ್ತು ಜನತೆಯ ಮನಮೆಚ್ಚುವಂತಹ ಕಾರ್ಯ ಮಾಡಿದ್ದಾರೆ. ಇಂತಹ ಎಲೆಮರೆಯ ಕಾಯಕ ಜೀವಿ ಪುನೀತ್‌ರಾಜ್ ನಟನೆ ಮತ್ತು ಸಾಮಾಜಿಕ ಸೇವೆ ಅನುಕರಣಿಯವಾಗಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಮತ್ತು ನಾಡಿನಲ್ಲಿ ಅವರ ಹೆಸರು ‘ಅಜಾರಾಮರವಾಗಿ ಯುಗಪುರುಷನಂತಾಗಲಿ’ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಆಶಯವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here