20.6 C
Shimoga
Friday, December 9, 2022

ಪುಷ್ಕರಣಿ ಅಭಿವೃದ್ದಿಗೆ ಸಂಕಲ್ಪ
ಕಾರ್ತಿಕ ಸೋಮವಾರ ಪ್ರಯುಕ್ತ ಅದ್ಧೂರಿ ಗಂಗಾರತಿ


ಹೊಸನಗರ: ಕಾರ್ತಿಕ ಮಾಸದ ಕೊನೆಯ ಸೋಮವಾರ ದಿನದಂದು ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಕನ್ನಡ ಸಂಘ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಅದ್ದೂರಿ ಗಂಗಾರತಿ ಕಾರ್ಯಕ್ರಮ ನೆರವೇರಿತು.


ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಗಣಪತಿ ದೇವಸ್ಥಾನದ ಪುಷ್ಕರಣಿಯನ್ನು ಅಭಿವೃದ್ದಿ ಪಡಿಸುವ ಸಂಕಲ್ಪದೊಂದಿಗೆ ಹಮ್ಮಿಕೊಂಡಿದ್ದ ಈ ವೈಭವೋಪೇತ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಹಾಗೂ ನಟ ಪುನೀತ್ ಅಭಿಮಾನಿಗಳು ಹಾಜರಿದ್ದು ಧನ್ಯತಾಭಾವ ಮೆರೆದರು.


ಚಿತ್ತಾಕರ್ಷಕ ವಿದ್ಯುತ್ ದೀಪಾಲಂಕಾರದೊಂದಿಗೆ ನವವಧುವಿನಂತೆ ಕಂಗೊಳಿಸುತ್ತಿದ್ದ ಪುಷ್ಕರಣಿಯಲ್ಲಿ ಪ್ರತಿಯೊಬ್ಬ ಭಕ್ತಾದಿಯು ಸ್ವತಃ ದೀಪ ಹಚ್ಚಿ ಗಂಗಾಮಾತೆಗೆ ಜ್ಯೋತಿ ಬೆಳಗುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.


ಪಟ್ಟಣದ ಪ್ರಮುಖ ಪರೋಹಿತರಾದ ಕೃಷ್ಣಮೂರ್ತಿಭಟ್, ರಾಘವೇಂದ್ರಭಟ್, ವೇಣುಗೋಪಾಲ್ ಹಾಗೂ ಶೇಷಾದ್ರಿಭಟ್ ನೇತೃತ್ವದಲ್ಲಿ ಗಂಗಾಮಾತ ಪೂಜಾಕೈಂಕರ್ಯಗಳು ಸಾಂಘವಾಗಿ ನೇರವೇರಿತು. ಗಂಗಾರತಿ ವೇಳೆಯಲ್ಲಿ ಮೊಳಗಿದ ಜಾಗಂಟೆ, ಶಂಖನಾದದ ಸದ್ದು ಜನಮನ ಸೆಳೆದಿತ್ತು. ನೂರಾರು ಜನರು ಸರದಿಸಾಲಿನಲ್ಲಿ ನಿಂತು ಗಂಗಾರತಿಯ ವೈಭವೋಪೇತ ದೃಶ್ಯವನ್ನು ಕಣ್‌ತುಂಬಿಕೊಂಡರು.

ಸ್ಥಳೀಯ ಕುವೆಂಪು ಹಾಗೂ ಮೂರಾರ್ಜಿ ವಸತಿ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರಗು ನೀಡಿದರು. ಇದೇ ಸಂದರ್ಭದಲ್ಲಿ ಪಟ್ಟಣದ ಹಿರಿಯ ಪುರೋಹಿತ ವರ್ಗಕ್ಕೆ ಸಂಘದ ವತಿಯಿಂದ ಗೌರವ ಸಮರ್ಪಣಾ ಕಾರ್ಯ ನೆರವೇರಿತು.


ಕಾರ್ಯಕ್ರಮದಲ್ಲಿ ರಾಜ್ಯ ಅಂಬೇಡ್ಕರ್ ಅಭಿವೃದ್ದಿ ನಿಗಮದ ನಿರ್ದೇಶಕ ಎನ್.ಆರ್. ದೇವಾನಂದ್, ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಶ್ರೀಪತಿರಾವ್, ಗಾಯತ್ರಿ, ಪುನೀತ್ ಕನ್ನಡ ಸಂಘದ ಪ್ರಶಾಂತ್ ಕುಮಾರ್(ಪಚ್ಚ), ವಿನಯ್ ಕುಮಾರ್, ರಾಜೇಶ್‌ಗೌಡ ಎಂ.ಕೆ, ಸಂತೋಷ್ ಶೇಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!