ಪೊಲೀಸ್ ಠಾಣೆಯಿಂದ ಎಸ್ಕೇಪ್ ಆದ ಟ್ರ್ಯಾಕ್ಟರ್ ಕಳ್ಳನಿಗೆ ಕಡೆಗೂ ಕೋಳ ತೊಡಿಸಿದ ಖಾಕಿ ಟೀಂ !!

0
944

ರಿಪ್ಪನ್‌ಪೇಟೆ: ಇತ್ತೀಚೆಗೆ ಠಾಣೆಯಿಂದ ಎಸ್ಕೇಪ್ ಆಗಿದ್ದ ಟ್ರ್ಯಾಕ್ಟರ್ ಕಳ್ಳ ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಪೊಲೀಸರು ನಿಟ್ಟುಸಿರು ಬಿಡುವಂತಾಗಿದ್ದಾರೆ.

ಕಳೆದ ಒಂದು ವಾರದ ಹಿಂದೆ ಸಾಗರ ರಸ್ತೆಯಲ್ಲಿನ ಉದ್ಯಮಿ ವೆಂಕಪ್ಪಶೆಟ್ಟಿಯವರ ಮನೆಯ ಅವರಣದಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್‌ ಅನ್ನು ಕಳವು ಮಾಡಲಾಗಿ ಈ ಬಗ್ಗೆ ಠಾಣೆಗೆ ದೂರು ದಾಖಲಿಸಲಾಗಿ ಸಂಶಯಾಸ್ಪದದ ಮೇಲೆ ಅರೋಪಿಯನ್ನು ಹಿಡಿದು ಠಾಣೆಗೆ ಕರೆತರಲಾಗಿ ವಿಚಾರಣೆಗೂ ಮುನ್ನವೇ ಠಾಣೆಯ ಸಿಬ್ಬಂದಿಯ ಮೇಲೆ ಹಲ್ಲೆ ಎಸಗಿ ಪರಾರಿಯಾಗಿದ್ದ ವಡಗೆರೆಯ ಚಂದಾಳದಿಂಬ ವಾಸಿ ಪ್ರತಾಪ್ ಸಿಂಗ್ ಇಂದು ಹೊಸನಗರ ಬಳಿಯಲ್ಲಿದ್ದಾನೆಂಬ ಖಚಿತ ಮಾಹಿತಿಯನ್ನಾದರಿಸಿ ರಿಪ್ಪನ್‌ಪೇಟೆ ಪೊಲೀಸರು ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಕಲಂ 353, 224, 323 IPC ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here