23.2 C
Shimoga
Sunday, November 27, 2022

ಪೊಲೀಸ್ ಹುತಾತ್ಮರ ದಿನಾಚರಣೆ | ಸಮಾಜದಲ್ಲಿರುವ ಎಲ್ಲರೂ ಶಾಂತಿ, ಸೌಹಾರ್ದತೆ, ನ್ಯಾಯಯುತವಾಗಿ ಬದುಕುವುದಾದರೆ ಪೊಲೀಸ್ ಹಾಗೂ ನ್ಯಾಯಾಲಯ ವ್ಯವಸ್ಥೆ ಅಗತ್ಯವೇ ಇಲ್ಲ

ಶಿವಮೊಗ್ಗ : ಸಮಾಜದಲ್ಲಿರುವ ಎಲ್ಲರೂ ಶಾಂತಿ,ಸೌಹಾರ್ದತೆ ಹಾಗೂ ನ್ಯಾಯಯುತವಾಗಿ ಬದುಕುವುದಾದರೆ ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಲಯ ವ್ಯವಸ್ಥೆ ಅಗತ್ಯವೇ ಇಲ್ಲ ಎಂದು ಎಂಬುದು ನನ್ನ ಅಭಿಪ್ರಾಯ ಎಂದು ಶಿವಮೊಗ್ಗ ಜಿಲ್ಲಾ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಮಲ್ಲಿಕಾರ್ಜುನ ಗೌಡ ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಇಂದು ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮನುಷ್ಯನಿಗೆ ನ್ಯಾಯತವಾಗಿ ಬದುಕುವ ಎಲ್ಲಾ ಅವಕಾಶಗಳು ಇದ್ದರೂ ಸಹ ಅನಗತ್ಯ ಕಿರಿಕಿರಿಗಳು ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಇದು ದುರಂತದ ಸಂಗತಿ. ಪರರ ರಕ್ಷಣೆಗಾಗಿ ಜೀವ ತ್ಯಾಗ ಮಾಡುವ ಹುತಾತ್ಮರೆಂದರೆ ಅವರೇ ಸೈನಿಕರು ಹಾಗೂ ಪೊಲೀಸರು. ದೇಶ ಕಾಯುವ ಸೈನಿಕರು ಹಾಗೂ ನಮ್ಮನ್ನು ರಕ್ಷಿಸುವ ಪೊಲೀಸರನ್ನು ಸಹ ನಾವು ಅವರ ರಕ್ಷಣೆಯ ವಿಷಯದಲ್ಲಿ ಗಮನಿಸಬೇಕಾಗಿರುವುದು ಅಗತ್ಯ. ಏಕೆಂದರೆ ಅವರಿಗೆ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವಂತಹ ಕೆಲಸ ಹೆಚ್ಚಾಗುತ್ತಿದೆ ಎಂದರು.

ಪೊಲೀಸರ ಕೈಲಿ ಪಿಸ್ತೂಲಿದೆ ಎಂದಾಕ್ಷಣ ಎಲ್ಲಿ ಬೇಕಲ್ಲಿ ಗುಂಡು ಹಾರಿಸಲು ಸಾಧ್ಯವಿಲ್ಲ ಕಾನೂನನ್ನು ಸಹ ಇಲ್ಲಿ ಪಾಲನೆ ಮಾಡಬೇಕಾಗಿದೆ . ಸಮಾಜದ ಅವ್ಯವಸ್ಥೆ ಹಾಗೂ ಅಹಿತಕರ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾಗಿದೆ. ಹಾಗಾಗಿ ಸಾರ್ವಜನಿಕರು ಸಹ ಪೊಲೀಸರಿಗೆ ಅವರ ರಕ್ಷಣೆಗೆ ಮುಂದಾಗಬೇಕಿದೆ, ಮನುಷ್ಯನಿಗೆ ದೇಹ ಹೋದ ಮೇಲೆ ಆತ್ಮ ಹೋಗಿಬಿಡುತ್ತದೆ. ಆದರೆ ಆತ ಮಾಡಿದ ಕಾರ್ಯಗಳು ಸದಾ ಕಾಲ ಉಳಿಯುತ್ತವೆ ಎಂದು ಹೇಳಿದರು.

ಪೊಲೀಸ್ ಹುತಾತ್ಮ ದಿನಕ್ಕೆ ಎಎಸ್ಐ ದಾನಂ ಕಂಠದಲ್ಲಿ ಹುತಾತ್ಮ ಗೀತೆ.

ಪರರ ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಜೀವ ಕಳೆದುಕೊಂಡ ಹುತಾತ್ಮರ ಸ್ಮರಣೆ ಅತ್ಯಂತ ಅಗತ್ಯ. ರಕ್ಷಣೆ ನೀಡುವ ರಕ್ಷಕರಿಗೆ ಸಾರ್ವಜನಿಕರು ರಕ್ಷಣೆ ನೀಡಬೇಕಾಗಿದೆ. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾತನಾಡುತ್ತಾ ಹುತಾತ್ಮರ ದಿನಾಚರಣೆಯ ವಿವರಣೆ ನೀಡಿದರು.

ಚೀನಾದ ಘಟನೆಯ ಹಿನ್ನೆಲೆಯಲ್ಲಿ ಒಂಬತ್ತು ಪೊಲೀಸರು ಹುತಾತ್ಮರಾದ ದಿನವನ್ನು ಪ್ರತಿ ವರ್ಷ ಪೊಲೀಸ್ ಉದ್ಯೋಗದ ಸೇವೆಯಲ್ಲಿ ಜೀವ ಕಳೆದುಕೊಂಡ ಪೊಲೀಸರನ್ನು ಗೌರವಿಸುವ ಆಚರಣೆ ಇದಾಗಿದೆ ಎಂದರು.

ದೇಶದ 264 ಹಾಗೂ ಇದರಲ್ಲಿ ರಾಜ್ಯದ 11 ಹುತಾತ್ಮ ಪೊಲೀಸರ ಹೆಸರುಗಳನ್ನು ಹೇಳುವ ಮೂಲಕ ಹುತಾತ್ಮರಿಗೆ ಗೌರವ ಅರ್ಪಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾ ರಕ್ಷಣಾಧಿಕಾರಿ, ಪೊಲೀಸ ಅಧಿಕಾರಿಗಳು, ಸಿಬ್ಬಂದಿಗಳು, ನಿವೃತ್ತ ಪೊಲೀಸರು, ಮಾಧ್ಯಮದವರು, ಸಾರ್ವಜನಿಕರು ಉಪಸ್ಥಿತರಿದ್ದರು. ಪೊಲೀಸ್ ವಾದ್ಯ ತಂಡ ಕಾರ್ಯಕ್ರಮದ ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದಿತ್ತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!