ಪೌರಕಾರ್ಮಿಕರ ಕೆಲಸ ಅತ್ಯಂತ ಶ್ಲಾಘನೀಯ ; ಬಿವೈಆರ್

0
71

ಶಿಕಾರಿಪುರ: ದೇಶದಲ್ಲಿ ಕೋವೀಡ್ ಸಂಕಷ್ಟದ ಸಂದರ್ಭದಲ್ಲಿ ದೇಶದ ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪಟ್ಟಣದ ಸ್ವಚ್ಛತೆಯನ್ನು ನಿರ್ವಹಿಸುವಲ್ಲಿ ಅವರ ಪಾತ್ರ ಹಿರಿದು ಸಂಸದ ಬಿ ವೈ ರಾಘವೇಂದ್ರರವರು ವಿಷಾದ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದಂದು ಶಿಕಾರಿಪುರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನದಿಂದ ದೇಶದಲ್ಲಿ ಅನೇಕ ಜನರ ಸಾವು ಉಂಟಾಗಿತ್ತು, ಇಂತಹಾ ಸಮಯದಲ್ಲಿ ತಮ್ಮ ಜೀವನದ ಹಂಗನ್ನು ತೊರೆದು ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿದ ಪೌರಕಾರ್ಮಿಕರ ಕೆಲಸವು ಅತ್ಯಂತ ಶ್ಲಾಘನೀಯವಾಗಿದ್ದು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹಾ ಪೌರಕಾರ್ಮಿಕರನ್ನ ಗುರುತಿಸಿ ಗೌರವಿ‌ಸದಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಒಬ್ಬ ಗುರುಗಳು ಅಥವಾ ಸ್ವಾಮಿಜಿಗಳು ಮನೆಗೆ ಬಂದರೆ ಪಾದಪೂಜೆ ಮಾಡುವುದನ್ನು ರೂಢಿಸಿಕೊಂಡಾದ್ದೇವೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದಲ್ಲಿ ಪೌರಕಾರ್ಮಿಕರ ಪಾದವನ್ನು ತೊಳೆದು ಪೂಜೆ ಮಾಡಿದ್ದನ್ನು ನೋಡಿದ್ದೇವೆ ಈರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಪೌರಕಾರ್ಮಿಕರ ಶ್ರಮಿಕರ ಸೇವೆಗಳನ್ನು ಗುರುತಿಸುವಂತಹ ಕಾರ್ಯ ನಮ್ಮ ದೇಶದ ಪ್ರಧಾನಿ ಮಾಡುತ್ತಿದ್ದಾರೆ.

ಯಾವುದೇ ಹುದ್ದೆಯನ್ನು ಮಾಡುವಾಗ ಆ ಹುದ್ದೆಗೆ ಗೌರವ ತರುವಂತಹ ಕೆಲಸ ಮಾಡಬೇಕಾಗಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರು ಒಬ್ಬ ವಿಜ್ಞಾನಿಯಾಗಿದ್ದ ಅವರು, ಒಂದು ಸಮಯದಲ್ಲಿ ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು ಅಲ್ಲದೇ, ಮುದ್ರಣಗಳಲ್ಲಿ ಅಕ್ಷರಗಳ ಜೋಡಣೆ ಮಾಡುವಂತಹ ಮೊಳೆಗಳನ್ನು ಹೊಡೆಯುತ್ತಿದ್ದರು, ಅಂಥವರು ದೇಶದ ರಾಷ್ಟ್ರಪತಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಹೀಗಾಗಿ ಯಾವುದೇ ರೀತಿಯ ಹುದ್ದೆಗಳ ಬಗ್ಗೆ ಅಸಹ್ಯ ಪಡದೇ ಆ ಹುದ್ದೆಗೆ ಪ್ರೀತಿಸಿ ಅದನ್ನು ಗೌರವಿಸಿದರೆ ಮುಂದೊಂದು ದಿನ ನಮಗೆ ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯ ಎಂದ ಅವರು, ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ರವರು ಪೌರಕಾರ್ಮಿಕರನ್ನು ಖಾಯಂ ಗೊಳಿಸುತ್ತಿರುವುದನ್ನು ಶ್ಲಾಘಿಸಿದ ಅವರು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 11,133 ನೇರಪಾವತಿ ಪೌರಕಾರ್ಮಿಕರನ್ನು ಖಾಯಂ ಸರ್ಕಾರಿ ನೌಕರರಾಗಿ ಪರಿಗಣಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ಇದರಿಂದ ಶಿಕಾರಿಪುರ ಪುರಸಭೆಯಲ್ಲಿ ಒಟ್ಟು 23, ಶಿರಾಳಕೊಪ್ಪದಲ್ಲಿ 20 ಪೌರಕಾರ್ಮಿಕರು ನೇರಪಾವತಿ, ಪೌರಕಾರ್ಮಿಕರು ಖಾಯಂ ನೌಕರ ಸೌಲಭ್ಯವನ್ನು ಪಡೆಯಲಿದ್ದಾರೆ. 

ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಖಾಯಂ ಪೌರಕಾರ್ಮಿಕರುಗಳಿಗೆ ನೀಡುತ್ತಿದ್ದ ವಾರ್ಷಿಕ ಭತ್ತೆ 3,500 ದಿಂದ 7,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಈ ಕಾರ್ಯಕ್ಕೆ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಊರನ್ನು ಸ್ವಚ್ಛಗೊಳಿಸುವ ನೀವು ನಿಮ್ಮ ಆರೋಗ್ಯವನ್ನು  ಕಾಪಾಡಿಕೊಳ್ಳಿ, ದೇಶ ಸ್ವಚ್ಛವಾಗಿರಲು ನಿಮ್ಮ ಕೆಲಸವನ್ನು ದೇಶದ ಕೆಲಸವೆಂದು ಪರಿಗಣಿಸಿ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಿ ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ರೇಖಾಭಾಯಿ ಮಂಜುನಾಥ್ ಸಿಂಗ್, ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಸದಸ್ಯರಾದ ಕೆ ಹಾಲಪ್ಪ, ಪುರಸಭೆ ಸದಸ್ಯರಾದ ಟಿ ಎಸ್ ಮೋಹನ್, ರೂಪಕಲಾ ಹೆಗಡೆ, ಲಕ್ಷ್ಮಿ ಮಹಾಲಿಂಗಪ್ಪ, ಪಾಲಾಕ್ಷಪ್ಪ, ರಮೇಶ್ (ಗುಂಡ), ಕಮಲಮ್ಮ, ಮಹಮ್ಮದ್ ದಸ್ತಗಿರ್(ರೋಷನ್) ಶಕುಂತಲ, ಗುರುರಾಜ್ ಜಗತಾಪ್, ಬೆಣ್ಣೆ ದೇವೇಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಭರತ್, ಸೇರಿದಂತೆ ಅನೇಕ ಪೌರಕಾರ್ಮಿಕರು, ಪುರಸಭಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಯೋನಿವೃತ್ತಿಯಾದ ಕೊಂಡೊಯ್ಯಲಾಗಿದೆ ಗೌರವಿಸಲಾಯಿತಲ್ಲದೆ, ಹಲವು ರೀತಿಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಮತ್ತು ಇತ್ತೀಚೆಗೆ ಪೌರಕಾರ್ಮಿಕರಿಗೆ ನಡೆಸಲಾದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಿಸಲಾಯಿತು. 

ತಂದೆ ಬಿ ಎಸ್ ಯಡಿಯೂರಪ್ಪನವರನ್ನು ಕೊಂಡಾಡಿದ ಸಂಸದ ಬಿ ವೈ ರಾಘವೇಂದ್ರ ರಾಜ್ಯದ ಪೌರಕಾರ್ಮಿಕರು ದಿನಂಪ್ರತಿ ಪಟ್ಟಣದ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ ಬೀದಿ ಬೀದಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ಇವರಿಗೆ ಹಲವು ವರ್ಷಗಳ ಹಿಂದೆ ತಿಂಗಳಿಗೊಮ್ಮೆ ಸರಿಯಾಗಿ ವೇತನ ಪಡೆಯುವುದು ಕಷ್ಟವಾಗುತ್ತಿತ್ತು. ಮೂರು ತಿಂಗಳಿಗೊಮ್ಮೆ ನಾಲ್ಕು ತಿಂಗಳಿಗೊಮ್ಮೆ ವೇತನ ಪಡೆಯಬೇಕಿತ್ತು. ನನ್ನ ತಂದೆ ಬಿ ಎಸ್ ಯಡಿಯೂರಪ್ಪರವರು 2009 ರಲ್ಲಿ ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪಟ್ಟಣ ಪಂಚಾಯಿತಿಗೆ 5 ಕೋಟಿ, ಪುರಸಭೆಗೆ 10 ಕೋಟಿ, ಕಾರ್ಪೊರೇಷನ್ ಗೆ 50 ಕೋಟಿ, ಮಹಾನಗರ ಪಾಲಿಕೆಗಳಿಗೆ 100 ಕೋಟಿ ಈರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ಮಾರ್ಟ್ ಸಿಟಿ ಯೋಜನೆಯೂ ಕೂಡ ಬಿ ಎಸ್ ಯಡಿಯೂರಪ್ಪರವರು ಆವಾಗಲೇ ಕನಸನ್ನು ಕಂಡು ನಗರದ ಅಭಿವೃದ್ಧಿಗೆ ಆದ್ಯತೆ ನೀಡಿ ಒಳಚರಂಡಿ ಮತ್ತು ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಶಿವಮೊಗ್ಗ ಬಿಟ್ಟರೆ ಶಿಕಾರಿಪುರ ತಾಲ್ಲೂಕಿನಲ್ಲಿ ರಾಜ್ಯದಲ್ಲಿ ಮೊದಲನೇ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನೀಡಿ ಅದರಂತೆ ಎಲ್ಲಾ ರೀತಿಯ ವ್ಯವಸ್ಥೆ ತಾಲ್ಲೂಕಿನಲ್ಲಿ ಮಾಡಲಾಗಿದೆ ಎಂದರು. 

ಜಾಹಿರಾತು

LEAVE A REPLY

Please enter your comment!
Please enter your name here