ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಿಬೇಕು: ಜಿಲ್ಲಾಧಿಕಾರಿ ಕೆ.ಎನ್ ರಮೇಶ್

0
163

ಚಿಕ್ಕಮಗಳೂರು: ಪೌರಕಾರ್ಮಿಕರು ತಮ್ಮ ಸೇವೆಯ ಮೂಲಕ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಶ್ರಮಿಸುತ್ತಿದ್ದು ಅವರ ಕಾರ್ಯವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.

ಗುರುವಾರ ನಗರದ ನಗರ ಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಸ್ವಾಮಿ ವಿವೇಕನಂದರು ಹೇಳಿದಂತೆ ಯಾರು ಬೇರೆಯವರಿಗಾಗಿ ಶ್ರಮೀಸತ್ತಾರೋ ಅವರ ಜೀವನ ಶ್ರೇಷ್ಟ, ಉಳಿದವರು ಬದುಕಿದ್ದು ಸತ್ತಂತೆ ಎಂಬ ನಾಣ್ನುಡಿಯಂತೆ ಪೌರಕಾರ್ಮಿಕರು ನಾಗರೀಕರ ಆರೋಗ್ಯದ ದೃಷ್ಟಿಯಿಂದ ನಗರದ ಸ್ವಚ್ಚತೆಗಾಗಿ ಶ್ರಮಿಸುತ್ತಾರೆ ಎಂದ ಅವರು ಪೌರಕಾರ್ಮಿಕರ ಕೆಲಸದಿಂದ ನಮ್ಮ ಮನೆ, ಮನ, ಪರಿಸರ ಸ್ವಚ್ಚ ಇದರಿಂದ ನಮ್ಮ ಆರೋಗ್ಯ ಸ್ವಚ್ಚ ಎಂದು ಹೇಳಿದರು.

ಜಿಲ್ಲಾ ವರಿಷ್ಠಾಧಿಕಾರಿ ಅಕ್ಷಯ್.ಎಂ.ಹೆಚ್ ಮಾತನಾಡಿ, ಕೋವಿಡ್-19 ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಪೌರಕಾರ್ಮಿಕರು ಪೊಲೀಸ್ ಇಲಾಖೆಯ ಸಿಬ್ಬಂದಿಯೊಂದಿಗೆ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಗಲಿರುಳು ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದ ಅವರು ನಗರವನ್ನು ನೈರ್ಮಲ್ಯ ಹಾಗೂ ಸುಂದರವಾಗಿರಿಸುವಲ್ಲಿ ಅವರ ಪಾತ್ರ ದೊಡ್ಡದು ಎಂದರು.

ಪೊಲೀಸ್ ಸಿಬ್ಬಂದಿ ಕೆಲಸ ಮತ್ತು ಪೌರ ಕಾರ್ಮಿಕರ ಕೆಲಸ ಎರಡು ಒಂದೇ ರೀತಿಯಾದ್ದಾಗಿದೆ ಎಂದ ಅವರು ಎಲ್ಲರು ಒಗ್ಗೂಡಿ ಕೆಲಸ ಮಾಡುವುದರಿಂದ ನಮ್ಮ ನಗರವನ್ನು ಸ್ವಚ್ಚತೆಯ ಹಾಗೂ ಸುಂದರ ನಗರವನ್ನಾಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಸುಸ್ಸಜ್ಜಿತ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈಗಾಗಲೇ ಕಾಮಗಾರಿ ಹಂತ ಬಹುತೇಕ ಪೂರ್ಣಗೊಂಡಿದ್ದು ಕೆಲ ತಿಂಗಳಲ್ಲಿಯೇ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಮನೆಗಳನ್ನು ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗುವುದು ನಿವೇಶನ ಹೊಂದಿಲ್ಲದವರನ್ನು ಆಶ್ರಯ ವಸತಿ ಸಮಿತಿ ಅಡಿಯಲ್ಲಿ ಗುರುತಿಸಿ ಅವರಿಗೂ ಮನೆಗಳನ್ನು ನಿರ್ಮಿಸಿಕೊಡಲು ಕ್ರಮವಹಿಸಲಾಗುವುದು ಎಂದರು.

ಪೌರಕಾರ್ಮಿಕರ ಹಿತಕಾಯುವ ಉದ್ದೇಶವನ್ನು ನಗರಸಭೆ ಹೊಂದಿದ್ದು ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಬದ್ದವಾಗಿದೆ ಮುಂದಿನ ವರ್ಷಗಳಲ್ಲಿ ನಗರ ಸಭೆಯ ಸ್ವಚ್ಚತೆ ಸೇರಿದಂತೆ ಅಭಿವೃದ್ಧಿ ವಿಷಯಗಳಲ್ಲಿ ರಾಜ್ಯದಲ್ಲಿಯೇ ಜಿಲ್ಲೆಯು ಪ್ರಥಮಸ್ಥಾನ ಗಳಿಸಿ ಇತರೆ ಜಿಲ್ಲೆಗಳಿಗೆ ಮಾದರಿಯನ್ನಾಗಿಸುವ ಯೋಜನೆ ಹೊಂದಿದ್ದ್ದು ಇದಕ್ಕಾಗಿ ಪೌರಕಾರ್ಮಿಕರು ಹಾಗೂ ನಾಗರಿಕರ ಸಹಕಾರ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ದಿನಾರಚಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದಂತಹ ಪೌರಕಾರ್ಮಿಕರಿಗೆ ಪ್ರಮಾಣ ಪತ್ರ ನೀಡುವುದರ ಮೂಲಕ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಆನಂದ, ನಗರ ಸಭೆ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ್ ಸ್ವಾಮಿ, ಪೌರಸೇವಾನೌಕರರ ಸಂಘದ ಅಧ್ಯಕ್ಷರು ಅಣ್ಣಯ್ಯ ಎನ್, ಪೌರಕಾರ್ಮಿಕ ಗೌರಮ್ಮ ಲೇಟ್ ಅಂಜನಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here