ಪೌರ ನೌಕರರು ಪಟ್ಟಣ ನಿವಾಸಿಗಳ ಆರೋಗ್ಯ ಕಾಪಾಡುವುದರ ಜೊತೆಗೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಮುತುವರ್ಜಿ ವಹಿಸಿಕೊಳ್ಳಬೇಕು: ಟಿ. ಬಾಲಚಂದ್ರಪ್ಪ

0
324

ಹೊಸನಗರ: ಪೌರ ನೌಕರರು ತಮ್ಮ ಪಟ್ಟಣ ಪ್ರದೇಶದ ಸುತ್ತ-ಮುತ್ತಲಿರುವ ಸ್ವಚ್ಚತೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಆದರೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಜಾವಬ್ದಾರಿ ವಹಿಸುವುದಿಲ್ಲ ಇದರಿಂದ ಪೌರ ನೌಕರರ ಕುಟುಂಬ ಸಂಕಷ್ಟಕ್ಕೆ ಒಳಗಾಗಲಿದ್ದು ಪಟ್ಟಣ ನಿವಾಸಿಗಳ ಆರೋಗ್ಯದ ಕಡೆಗೆ ಎಷ್ಟು ಜಾವಬ್ದಾರಿಯಿಂದ ಸ್ವಚ್ಚತೆ ಮಾಡಿ ಆರೋಗ್ಯ ಕಾಪಾಡುತ್ತಿರೂ ಅಷ್ಟೆ ಜವಬ್ದಾರಿಯನ್ನು ತಮ್ಮ ಆರೋಗ್ಯದ ಕಡೆಗೂ ಮುತುವರ್ಜಿ ವಹಿಸಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ಟಿ ಬಾಲಚಂದ್ರಪ್ಪನವರು ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರ ನೌಕರರ ದಿನಾಚರಣೆಯನ್ನು ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿ, ಪೌರ ನೌಕರರು ಈ ದೇಶದ ಸೈನಿಕರಿದ್ದಂತೆ ಸೈನಿಕರು ದೇಶವನ್ನು ರಕ್ಷಿಸಲು ಗಡಿಯಲ್ಲಿ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ನಮ್ಮನ್ನು ರಕ್ಷಿಸುತ್ತಿದ್ದಾರೆ ಅದೇ ರೀತಿ ಪೌರ ನೌಕರರು ಆಯಾಯ ಭಾಗಗಳಲ್ಲಿ ಆಯಾಯ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೋಗಗಳು ಬರದಂತೆ ನಗರ-ಪಟ್ಟಣಗಳನ್ನು ಸ್ವಚ್ಛ ಮಾಡುತ್ತಾ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚ ಮಾಡುವುದರಿಂದ ಯಾವುದೇ ಸಾರ್ವಜನಿಕರಿಗೆ ಕಾಯಿಲೆ ಬರದಂತೆ ಸೈನಿಕರಂತೆ ಸೇವೆ ಸಲ್ಲಿಸುತ್ತಿದ್ದಾರೆ ಪೌರ ನೌಕರರ ಸೇವೆಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಆರೋಗ್ಯ ಸ್ತಿರವಾಗಿರಬೇಕಾದರೆ ಪೌರ ನೌಕರರ ಕೆಲಸಕ್ಕೆ ಪ್ರಶಂಸೆ ನೀಡಲೇಬೇಕು. ಪೌರ ನೌಕರರು ಇಲ್ಲವಾದರೆ ಈ ದೇಶವೆ ತಲ್ಲಣವಾಗುತ್ತಿತ್ತು ಜನರು ರೋಗಗಳಿಂದ ಸಾಯುತ್ತಿದ್ದರು ಇದನ್ನು ಮನಗೊಂಡ ಸರ್ಕಾರ ಇವರಿಗೂ ಒಂದು ದಿನ ರಜೆ ಬೇಕು. ಇವರ ಪೌರ ನೌಕರರ ದಿನಾಚರಣೆಯನ್ನು ಆಚರಿಸಬೇಕು ಎಂಬ ಉದ್ದೇಶದಿಂದ 2014ರಲ್ಲಿ ಪೌರ ನೌಕರರ ದಿನಾಚರಣೆಯನ್ನಾಗಿ ಘೋಷಿಸಿದೆ ಎಂದರು.

ಈ ಸಂದರ್ಭದಲ್ಲಿ ಎಲ್ಲ ಪೌರ ನೌಕರರಿಗೆ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಾಗೂ ಪಟ್ಟಣ ಪಂಚಾಯಿತಿ ನೌಕರ ವರ್ಗದವರಿಗೆ ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಪ್ರಶಸ್ತಿ ಪತ್ರ ನೀಡಲಾಯಿತ್ತು.

ಈ ಸಮಾರಂಭದ ಅದ್ಯಕ್ಷತೆಯನ್ನು ಪ.ಪಂ.ಅಧ್ಯಕ್ಷರಾದ ಗುಲಾಬಿ ಮರಿಯಪ್ಪನವರು ವಹಿಸಿದ್ದು, ಉಪಾಧ್ಯಕ್ಷೆ ಕೃಷ್ಣವೇಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಗುರುರಾಜ್, ಸಿಂಥೀಯ, ಗಾಯಿತ್ರಿ ನಾಗರಾಜ್, ನಾಗಪ್ಪ, ಪಟ್ಟಣ ಪಂಚಾಯಿತಿ ನೌಕರರಾದ ಪ್ರಶಾಂತ್, ಪರಶುರಾಮ್, ಲಕ್ಷ್ಮಣ್, ಗಣೇಶ್ ಹೆಗಡೆ, ಉಮಾಶಂಕರ್, ಪರಶುರಾಮ್, ಬಸವರಾಜ್, ನೇತ್ರಾವತಿ, ಸುಮಿತ್ರ, ಆಸ್ಮಾ, ಕುಮಾರಿ, ಯಶೋದಮ್ಮ, ಚಂದ್ರಪ್ಪ ಇನ್ನೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here