ಪೌಷ್ಟಿಕಾಂಶದ ಆಹಾರ ಸೇವನೆಯಿಂದ ಮಕ್ಕಳು ಉತ್ತಮ ಆರೋಗ್ಯವಂತರಾಗಲು ಸಾಧ್ಯ

0
323

ರಿಪ್ಪನ್‌ಪೇಟೆ: ರಾಸಾಯನಿಕ ಗೊಬ್ಬರ ಔಷಧಿಯ ಬಳಕೆಯಿಂದಾಗಿ ನಿತ್ಯ ಸೇವಿಸುವ ಆಹಾರ ಪದಾರ್ಥಗಳು ವಿಷಯುಕ್ತವಾಗಿ ಮನುಷ್ಯನ ದೇಹವನ್ನು ಸೇರುವುದರಿಂದ ಗರ್ಭೀಣಿಯರು ಮತ್ತು ಮಗುವಿನಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಾಣಿಸುವುದು ಎಂದು ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವನಿತಾ ಗಂಗಾಧರ ಕಳವಳ ವ್ಯಕ್ತಪಡಿಸಿದರು.

ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಗುಡ್ತಿ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕ್ ಪಂಚಾಯ್ತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಯೋಜಿಸಲಾದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿ ಒಂದು ಬಲಿಷ್ಟ ದೇಶ ಸಮಾಜ ನಿರ್ಮಾಣವಾಗಬೇಕಾದರೆ ಅರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾಗಿದೆ.ಅದ್ದರಿಂದ ಪ್ರಾರಂಭದಲ್ಲಿ ಮಕ್ಕಳು ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿದರೆ ಬಲಿಷ್ಠಭಾರತವನ್ನು ನಿರ್ಮಾಣ ಮಾಡಬಹುದು ಎಂದರು.

ಅಂಗನವಾಡಿ ಕೇಂದ್ರದ ಪೋಷಕ ಸಮಿತಿಯ ಅಧ್ಯಕ್ಷೆ ಸುಮ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲೀಲಾವತಿ ಪುಂಡಲೀಕ್ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ವಿಶುಕುಮಾರ್ ಹಾಗೂ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸತೀಶ್ ಭಟ್ ಉಪಸ್ಥಿತರಿದ್ದು ಮಾತನಾಡಿ, ಮಕ್ಕಳಿಗೆ ಹಸಿ ತರಕಾರಿ ಸೊಪ್ಪು ಇನ್ನಿತರ ದ್ವದಳಕಾಳುಗಳನ್ನು ನೀಡುವುದರಿಂದ ಉತ್ತಮ ಅರೋಗ್ಯ ಹೊಂದಲು ಸಾಧ್ಯ ಸಾವಯವ ಗೊಬ್ಬರ ಬಳಕೆ ಮಾಡಿದ ಅಹಾರವನ್ನು ಸೇವಿಸಿ ಸಾಧ್ಯವಾದಷ್ಟು ಜಿಂಕ್ ಫುಡ್ ಸೇವನೆಯಿಂದ ದೂರವಿರುವಂತೆ ಸಲಹೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ಸುಮ ಕಲ್ಲೂರು ಪ್ರಾರ್ಥಿಸಿದರು. ಮೂಗುಡ್ತಿ ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ ಸ್ವಾಗತಿಸಿದರು. ಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಕಾರ್ಯಕರ್ತೆ ರೂಪಾ ಆರೋಗ್ಯ ಇಲಾಖೆಯಡಿ ಸರ್ಕಾರದಿಂದ ದೊರೆಯುವ ಹಲವು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಲತಾ ಕಣಬಂದೂರು ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here