ಪ್ರಕಾಶ್ ಟ್ರಾವೆಲ್ಸ್ ಮಾಲಿಕ ನಾಪತ್ತೆ ಪ್ರಕರಣ ; ಪಟಗುಪ್ಪ ಸೇತುವೆ ಮೇಲೆ ಕಾರು, ಮೊಬೈಲ್ ಪತ್ತೆ !!

0
5930

ಹೊಸನಗರ : ಸಾಗರದ ಖಾಸಗಿ ಬಸ್ (ಪ್ರಕಾಶ್ ಟ್ರಾವೆಲ್) ಮಾಲೀಕ ಶುಕ್ರವಾರ ಸುಮಾರು ರಾತ್ರಿ 08:00 ಗಂಟೆಯ ಹೊತ್ತಿಗೆ ತಮ್ಮ ಬಸ್ ಚಾಲಕ ಮೊಬೈಲ್ ಕರೆ ಸ್ವೀಕರಿಸಿದ್ದೂ ನಂತರದಿಂದ ಪ್ರಕಾಶ್ ಮೊಬೈಲ್ ಗೆ ಎಷ್ಟೇ ಬಾರಿ ಕರೆ ಮಾಡಿದರೂ ಯಾವುದೇ ಕರೆ ಸ್ವೀಕರಿಸುತ್ತಿಲ್ಲ.

ಅನುಮಾನಗೊಂಡು ನಾಪತ್ತೆ ಬಗ್ಗೆ ದೂರು ಬಳಿಕ ಪ್ರಕಾಶ್ ಮೊಬೈಲ್ ನೆಟ್‌ವರ್ಕ್ ಹುಲಿದೇವರಬನ ಟವರ್ ಲೊಕೇಶನ್ ತೋರಿಸುತ್ತಿದ್ದೂ ನಂತರ ಶೋಧ ನಡೆಸಿದಾಗ ಪ್ರಕಾಶ್ ಅವರ ಕಾರು ಹಾಗೂ ಮೊಬೈಲ್ ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಮಧ್ಯದಲ್ಲಿ ಪತ್ತೆಯಾಗಿದೆ.

 

ಘಟನಾ ಸ್ಥಳಕ್ಕೆ ಹೊಸನಗರ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೊಬೈಲ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here