ಹೊಸನಗರ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರಿಂದ ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕಾಗಿ ರಾಜಯೋಗ ಪ್ರವಚನವನ್ನು ಮಾರ್ಚ್ 29ನೇ ಸೋಮವಾರದಿಂದ ಏಪ್ರಿಲ್ 7ನೇ ಬುಧವಾರದವರೆವಿಗೆ ಉಚಿತ ಪ್ರವಚನವನ್ನು ಏರ್ಪಡಿಸಲಾಗಿದೆ ಎಂದು ಬ್ರಹ್ಮಕುಮಾರಿ ಶೋಭಾರವರು ತಿಳಿಸಿದ್ದಾರೆ.
ಅವರು ಹೊಸನಗರ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿರುವ ಈಶ್ವರಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ತಮ್ಮ ಸ್ವಂತ ಕಟ್ಟಡದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಈ ಪ್ರವಚನವನ್ನು ಪ್ರತಿ ದಿನ ಸಂಜೆ 6:30ರಿಂದ 7:30ರವರೆವಿಗೆ ನಮ್ಮ ಸಂಸ್ಥೆಯ ಆವರಣದಲ್ಲಿ ನಡೆಯಲಿದ್ದು ಪ್ರವಚನವನ್ನು ನುರಿತ ಬ್ರಹ್ಮಕುಮಾರೀಯ ಶಿವಮಣಿಯವರು ನೀಡಲಿದ್ದಾರೆ. ಈ ಪ್ರವಚನದಲ್ಲಿ ಮನಃಶಾಂತಿ, ಸ್ವಾನುಭೂತಿ, ಈಶ್ವರಾಮಭೂತಿ, ನಿರಂತರ ಖುಷಿ, ಚಿಂತಾಮುಕ್ತ ಜೀವನ, ರಾಜಯೋಗ, ಕರ್ಮಯೋಗ, ಕಾಲಚಕ್ರದ ರಹಸ್ಯ ಮಾನಸಿಕ ಮತ್ತು ಆರೋಗ್ಯಕ್ಕಾಗಿ ರಾಜಯೋಗವನ್ನು ಭೋಧಿಸಲಾಗುವುದು ಎಂದರು.
ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಪ್ರವಚನವನ್ನು ಕೇಳಿ ಮನಸ್ಸಿನಲ್ಲಿರುವ ಜಂಜಾಟವನ್ನು ತೋಲಗಿಸಿಕೊಳ್ಳಬೇಕೆಂದು ಕೇಳಿಕೊಂಡರು.
ವರದಿ: ಹೆಚ್.ಎಸ್.ನಾಗರಾಜ್
Related