ಪ್ರತಿ 10 ಜನರ ಸಾವಿನಲ್ಲಿ ಒಬ್ಬ ಧೂಮಪಾನಿ ಇದ್ದಾನೆ ಎಂಬುದು ಆತಂಕಕಾರಿ ವಿಷಯ: ಎನ್. ಕರಿಬಸವರಾಜ್

0
162

ಶಿಕಾರಿಪುರ: ಧೂಮಪಾನವು ಅತೀ ಸಣ್ಣವಯಸ್ಸಿನಲ್ಲಿಯೇ ಪ್ರಾರಂಭಿಸುವ ಚಟವಾಗಿದೆ. ತಂಬಾಕು ಸೇವನೆ ಮಾಡುವವರು ತಂಬಾಕು ಸೇವನೆ ಮಾಡದವರಿಗಿಂತ 10 ವರ್ಷ ಮುಂಚಿತವಾಗಿಯೇ ಸಾವನ್ನಪ್ಪುತ್ತಿರುವುದು ಆತಂಕಕಾರಿ ವಿಷಯ ಎಂದು ಶಿಕ್ಷಕ ಎನ್.ಕರಿಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಶಿಕಾರಿಪುರ ತಾಲ್ಲೂಕು ಈಸೂರು ವಲಯದ ಕಲ್ಮನೆ ಕಾರ್ಯಕ್ಷೇತ್ರ ಮತ್ತು ಸರ್ಕಾರಿ ಹಿರಿಯ ಪ್ರೌಢ ಶಾಲೆ ಕಲ್ಮನೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ದುಶ್ಚಟಗಳಿಂದ ದೂರವಿರುವಂತೆ ಹಾಗೂ ದುಶ್ಚಟಗಳ ಪ್ರೇರಣೆ ನೀಡದಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳದಂತೆ ಹೇಗೆ ನಿರ್ವಹಿಸಬೇಕು ಮತ್ತು ಸಮಾಜಕ್ಕೆ ಹೇಗೆ ಉತ್ತಮ ವ್ಯಕ್ತಿಯಾಗಿ ಕೊಡುಗೆ ನೀಡಬೇಕೆಂದು ವಿವರವಾಗಿ ತಿಳಿಸಿದರು. ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಅನಾರೋಗ್ಯಕ್ಕೆ ತುತ್ತಾಗುವ ಸಂದರ್ಭಗಳು ಹೆಚ್ಚು ಗಂಭೀರ ಕಾಯಿಲೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಮಕ್ಕಳು ದೃಢ ಸಂಕಲ್ಪ ಮಾಡಿದರೆ ದುಶ್ಚಟದಿಂದ ದೂರವಿದ್ದು ಹಲವು ಉನ್ನತೆ ಕ್ಷೇತ್ರದಲ್ಲಿ ಸಾಧಿಸಲು ಹಲವಾರು ದಾರಿ ಇದೆ, ಇಂತಹ ಸಭೆಗಳನ್ನು ನಡೆಸಿ ತಂಬಾಕು ಸೇವನೆಯನ್ನು ತಡೆಗಟ್ಟುವಲ್ಲಿ ಪ್ರಯತ್ನಿಸುತ್ತಿದ್ದಾರೆ ಆದ್ದರಿಂದ ನಾವೆಲ್ಲರೂ ಧೂಮಪಾನ ಮುಕ್ತ ವ್ಯಕ್ತಿಗಳಾಗಿ ತಂಬಾಕು ರಹಿತ ಜೀವನ ನಡೆಸೋಣ ಆರೋಗ್ಯವಂತರಾಗಿ ಬಾಳೋಣ ಎಂದು ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮೇಲ್ವಿಚಾರಕಿ ಶ್ವೇತಾ ಮಾತನಾಡಿ, ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ತಂಬಾಕಿನ ಕೆಡುಕು ಸುಖ ಸಂತೋಷಕ್ಕೆ ತೊಡಕು ಎಂಬ ಶಿರೋನಾಮೆಯಡಿ ಧರ್ಮಸ್ಥಳ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಅದರಂತೆಯೇ ಸಾರ್ವಜನಿಕರು ಧನಾತ್ಮಕವಾಗಿ ಸ್ಪಂದಿಸಿದ್ದು ಈ ದುಶ್ಚಟದಿಂದ ಕೆಲವರು ದೂರಾಗಿದ್ದಾರೆ ಎಂದರು. 1956 ರಲ್ಲಿಯೇ ವಿಶ್ವಸಂಸ್ಥೆಯು ವ್ಯಸನವೆಂಬುದು ರೋಗವೆಂಬುದಾಗಿಯೇ ಘೋಷಿಸಿದೆ. ಒಂದು ಸಾರಿ ತಂಬಾಕಿನ ಹವ್ಯಾಸಕ್ಕೆ ಬಲಿಯಾದರೇ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಂತೆ ಎಂದರು. ನಿಧಾನವಾಗಿ ರೋಗ ಉಲ್ಬಣಗೊಳ್ಳುವುದಲ್ಲದೇ ಚಿಕಿತ್ಸೆ ದುಬಾರಿಯಾಗಿ ವ್ಯಸನಿ ಕಂಗಾಲಾಗುತ್ತಾನೆ ಎಂದರು. ಭಾರತದಲ್ಲಿ ಪ್ರತಿ 100 ಕ್ಯಾನ್ಸರ್ ಪ್ರಕರಣಗಳಲ್ಲಿ 50 ರೋಗಿಗಳು ತಂಬಾಕು ಸೇವನೆಯಿಂದ ಒಳಗಾದವರೇ ಈ ಪೈಕಿ ನಾಲಿಗೆ, ಬಾಯಿ, ಹಲ್ಲು, ಗಂಟಲು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಗಳಾಗಿವೆ ಎಂದರು.

ಈ ಹಾಳು ತಂಬಾಕು ಸೇವನೆಯಿಂದ ಪಾರ್ಶ್ವವಾಯು, ರಕ್ತದೊತ್ತಡ, ಹೃದಯಾಘಾತ, ಶ್ವಾಸಕೋಶದ ಸಮಸ್ಯೆ, ಅಸ್ತಮಾ, ಕ್ಷಯ, ಕಫಾ, ಎದೆಯ ಸೋಂಕುಗಳು ಪುರುಷರಿಗಾದರೆ ಮಹಿಳೆಯರಿಗೆ ಗರ್ಭಪಾತ,ಫಲವತ್ತತೆಯಲ್ಲಿ ಕ್ಷೀಣತೆ, ಶಿಶು ಜನನದಲ್ಲಿ ಏರುಪೇರು, ಗರ್ಭಕಂಠದ ಕ್ಯಾನ್ಸ್ರ್, ಕುರುಡುತನ ಹೀಗೆ ವಿವಿಧ ಕಾಯಿಲೆಗಳಿಗೂ ಕಾರಣವಾಗಿದೆ ಎಂದರು. ತಂಬಾಕು ಸೇವನೆ ಮಾಡುವವರು ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ದುಷöರಿಣಾಮಗಳಿಗೆ ಜನರು ಸಾವನ್ನಪ್ಪುತ್ತಿದ್ದಾರೆ ಎಂದರು. ಪ್ರತಿ ಹತ್ತು ಜನರ ಸಾವಿನಲ್ಲಿ ಒಬ್ಬ ಧೂಮಪಾನಿಯಾಗಿರುವುದು ಆತಂಕಕಾರಿಯಾಗಿದೆ. ಧೂಮಪಾನದಲ್ಲಿ ಪ್ರಮುಖವಾಗಿ ಸಿU್ಪರೇಟ್, ಬೀಡಿ, ಗುಟ್ಕಾ ಮುಂತಾದ ಹೊಗೆಸೊಪ್ಪು ಪದಾರ್ಥದಲ್ಲಿ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತದೆ. ಸಮೀಕ್ಷೆಯ ಪ್ರಕಾರ ಸಿಗರೇಟ್‌ನಲ್ಲಿ 4000 ಕ್ಕು ಮಿಕ್ಕಿದ ರಾಸಾಯನಿಕ ಸಂಯುಕ್ತಗಳು. 200 ಕ್ಕೂ ಹೆಚ್ಚಿನ ವಿಷಗಳು ಹಾಗೆಯೇ 43 ಕ್ಕೂ ಹೆಚ್ಚಿನ ಕ್ಯಾನ್ಸ್ರ್‌ಕಾರಕ ವಸ್ತುಗಳು ಇರುವುದಾಗಿ ತಿಳಿಸಿದರು. ದೇಶದಲ್ಲಿ ಶೇ.21 ಯುವಜನತೆ ಧೂಮಪಾನಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬಹುತೇಕ ತಂಬಾಕು ಸೇವನೆ ಮಾಡಿದವರಲ್ಲಿ ತಮ್ಮ 18 ನೇ ವಯಸ್ಸಿನಲ್ಲಿಯೇ ಆರಂಭಿಸುವುದಾಗಿ ಅಂಕಿ ಅಂಶಗಳು ತಿಳಿಸಿವೆ ಎಂದರು. ಪರೋಕ್ಷ ಧೂಮಪಾನವು ಪ್ರತ್ಯಕ್ಷ ಧೂಮಪಾನದಷ್ಟೇ ಅಪಾಯಕಾರಿಯಾಗಿದೆ ಎಂದರು.

ಯುವಜನತೆ ಧೂಮಪಾನ ಮಾಡದವರ ಸಂಪರ್ಕದಲ್ಲಿರುವುದು ಒಳಿತು ಹಾಗೆಯೆ ಜೀವನಶೈಲಿಯನ್ನು ಬದಲಾಯಿಕೊಂಡಲ್ಲಿ ವ್ಯಸನಿಗಳಾಗುವುದನ್ನು ತಪ್ಪಿಸಬಹುದಾಗಿದೆ, ಆಹಾರ ಕ್ರಮ, ವ್ಯಾಯಾಮ, ವಿಶ್ರಾಂತಿ, ಯೋಗಾಭ್ಯಾಸ, ಕ್ರೀಡೆ, ಆಟೋಟ, ಸಮಾಜಸೇವೆ, ಪ್ರಾರ್ಥನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಉತ್ತಮ ಆರೋಗ್ಯಹೊಂದುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯ ನಾಗರಾಜ್ ನಾಯ್ಕ್, ಸಹ ಶಿಕ್ಷಕರಾದ ಯುವರಾಜ್, ಶಿಲ್ಪಾ, ರಮೇಶ್, ರಾಜು ಮತ್ತು ಒಕ್ಕೂಟದ ಅಧ್ಯಕ್ಷೆ ಆಶಾ ಹಾಗು ಪದಾಧಿಕಾರಿಗಳಾದ ಆಶಾ, ಕರಿಬಸಮ್ಮ, ಅನಿತಾ, ಸುಜಾತ, ಶಾಲಾ ಸಿಬ್ಬಂದಿವರ್ಗದವರು, ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸ್ವಾಗತ ಸೇವಾ ಪ್ರತಿನಿಧಿಯಾದ ಶೈಲಜಾ ಇವರು ನೆರವೇರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here