ಪ್ರಪಂಚದ ಎಲ್ಲ ಇಂಜಿನಿಯರ್‌ಗಳಿಗೂ ಸರ್ ಎಂ. ವಿಶ್ವೇಶ್ವರಯ್ಯ ಸ್ಫೂರ್ತಿ: ಮಾಯನ್‌ಗೌಡ

0
315

ಹೊಸನಗರ: ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಪಂಚದ ಎಲ್ಲ ಇಂಜಿನಿಯರ್‌ಗಳಿಗೂ ಸ್ಫೂರ್ತಿಯಾಗಿದ್ದಾರೆ ಅವರ ಮಾಡಿದ ಕೆಲಸದ ನೆನಪುಗಳು ಮಾತ್ರ ಜೀವಂತ ಉಳಿದಿದೆ ಎಂದು ಮೆಸ್ಕಾಂ ಇಲಾಖೆಯ ಇಂಜಿನಿಯರ್ ಮಾಯನ್‌ಗೌಡರವರು ಹೇಳಿದರು.

ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಮೆಸ್ಕಾಂ ಇಲಾಖೆಯ ಆವರಣದಲ್ಲಿ ಮೆಸ್ಕಾಂ ಕಛೇರಿಯ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರ ಸಂಘದ ವತಿಯಿಂದ ಸರ್.ಎಂ.ವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಸರ್.ಎಂ.ವಿಯವರ ಬದುಕು ಬರಿ ಇಂಜಿನಿಯರ್‌ಗಳಲ್ಲದೇ ಪ್ರತಿಯೊಬ್ಬರಿಗೂ ಕರ್ಮಯೋಗಿಯಂತೆ ತುಂಬು ಜೀವನ ನಡೆಸಿದವರು ತಮ್ಮ ಪೂರ್ಣ ಪ್ರಮಾಣದ ಜೀವನವನ್ನು ಪ್ರಪಂಚದ ಉದ್ದಾರಕ್ಕಾಗಿ ಅವರು ತ್ಯಾಗ ಮಾಡಿದ್ದಾರೆ ಅವರ ಪ್ರಾಮಾಣಿಕತೆ ಸಮಯ ಪ್ರಜ್ಞೆಯಿಂದ ಕಟ್ಟಿದ ಕನ್ನಂಬಾಡಿ ಕಟ್ಟೆಯಂತಹ ಯೋಜನೆ ಸೇರಿದಂತೆ ಅಣೆಕಟ್ಟುಗಳ ನಿರ್ಮಾಣದ ಶಾಶ್ವತ ಕೆಲಸ ಇನ್ನೂ ಕಣ್ಮುಂದಿದೆ ಅವರು ಸರ್ಕಾರಿ ಕೆಲಸ ಮಾಡಬೇಕಾದರೆ ಮಾತ್ರ ಸರ್ಕಾರದ ಸವಲತ್ತು ಉಪಯೋಗಿಸಿ ಮಾದರಿ ಜೀವನ ನಡೆಸಿದವರು ಎಂದರು.

ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಇಂಜಿನಿಯರ್ ರಾಜೇಶ್ವರಿ ಹಾಗೂ ಸಿಬ್ಬಂದಿಗಳು ಗುತ್ತಿಗೆದಾರರಾದ ಪ್ರಶಾಂತ್ ಎಸ್ ಇನ್ನೂ ಮುಂತಾದವರು ಭಾಗವಹಿಸಿದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here