23.2 C
Shimoga
Sunday, November 27, 2022

ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು !

ಶೃಂಗೇರಿ : ಬೆಂಗಳೂರಿನಿಂದ ಕಾಫಿನಾಡಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಶೃಂಗೇರಿಯ ತುಂಗಾ ನದಿಯಲ್ಲಿ ನೀರುಪಾಲಾಗಿರುವ ಘಟನೆ ಶೃಂಗೇರಿ ಶಾರದಾಂಬೆ ದೇಗುಲದ ಸಮೀಪ ನಡೆದಿದೆ.

ಜಿಗಣಿ ಕೃಷ್ಣ ಕಾಲೇಜಿನಲ್ಲಿ ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದನ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿನಿಂದ ಪ್ರವಾಸ ಬಂದಿದ್ದರು. ಈ ವೇಳೆ ತುಂಗಾ ನದಿಯಲ್ಲಿ ಈಜು ಹೋದಾಗ ಚಂದನ್‌ ನದಿಯಲ್ಲಿ ಮುಳುಗಿ ಸಾವನ್ನಪಿದ್ದಾನೆ ಎಂದು ತಿಳಿದುಬಂದಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!