ಪ್ರಾಂಶುಪಾಲರ ನಿರ್ಲಕ್ಷ್ಯ ಆರೋಪ: ಉಚಿತ ಲ್ಯಾಪ್‌ಟಾಪ್ ನಿಂದ ವಂಚಿತರಾದ ಕೊಡಚಾದ್ರಿ ಕಾಲೇಜು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಲು ತಯಾರಿ..!

0
1829

ಹೊಸನಗರ: ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪ್ರಥಮ ಪದವಿಯ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಿದ್ದು, ಈ ಕಾಲೇಜಿನ 289 ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ ಪಡೆದಿದ್ದಾರೆ. ಆದರೆ ಪ್ರಾಂಶುಪಾಲರಾದ ದಿವಾಕರ್‌. ಹೆಚ್‌ ಇವರ ಉದಾಸೀನತೆ ಮತ್ತು ನಿರ್ಲಕ್ಷ್ಯದಿಂದ ಅರ್ಹ 11 ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ ಪಡೆಯುವಲ್ಲಿ ವಂಚಿತರಾಗಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ವಿದ್ಯಾರ್ಥಿಗಳ ಸಮಾನತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು ರಿಟ್‌ ಅರ್ಜಿ ಸಲ್ಲಿಸುವ ಮೂಲಕ ನ್ಯಾಯ ಪಡೆಯಲು ಹೈಕೋರ್ಟ್‌ ಮೆಟ್ಟಿಲೇರಲು ನೊಂದ ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ.

ಇದಲ್ಲದೇ ಉನ್ನತ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ DSC KEY ಯನ್ನು ಮುಂಚಿತವಾಗಿ ನವೀಕರಣ ಮಾಡಿಸಿಕೊಳ್ಳುವ ಬಗ್ಗೆ ದಿನಾಂಕ: 12.11.2020 ರಂದೇ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಮಾಡಿದ್ದರೂ ಸಹ ಇಲ್ಲಿನ ಪ್ರಾಂಶುಪಾಲರು ನಿರ್ಲಕ್ಷ್ಯ ಮಾಡಿ DSC KEY ಯನ್ನು ನವೀಕರಣಗೊಳಿಸಿಕೊಳ್ಳದೇ ಅನುದಾನ ಬಳಕೆ ಮಾಡದೇ ವಿದ್ಯಾರ್ಥಿ ವೇತನದ ಅನಗತ್ಯ ವಿಳಂಬ ಮತ್ತು ಅನುದಾನ ವ್ಯಪಗತವಾಗುತ್ತಿದೆ.

ಆರ್ಥಿಕ ಇಲಾಖೆಯ ಆದೇಶದಂತೆ ಅನುದಾನ ಬಳಕೆ ಮಾಡಿಕೊಳ್ಳುವ ಸಂಬಂಧ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು 26.03.2021 ಕೊನೆಯ ದಿನಾಂಕವಾಗಿದ್ದು, ಶಿವಮೊಗ್ಗದ ಪ್ರಾದೇಶಿಕ ಕಚೇರಿಯ ಜಂಟೀ ನಿರ್ದೇಶಕರು ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಇತ್ತ ಗಮನ ಹರಿಸುವರೇ ಎಂದು ಕಾದು ನೋಡಬೇಕಿದೆ.

ಜಾಹಿರಾತು

LEAVE A REPLY

Please enter your comment!
Please enter your name here