ಪ್ರೀತಿಗೆ ಜಾತಿ ಅಡ್ಡಿ: ವಿಷ ಸೇವಿಸಿದ್ದ ಪ್ರೇಮಿಗಳು ! ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಕರ ಸಾವು !!

0
2877

ಶಿವಮೊಗ್ಗ: ತಾಲೂಕಿನ ಚೋರಡಿ ಸಮೀಪದ ಹೆಗ್ಗೆನಕೆರೆಯ ಬಳಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸೋಮವಾರ ನಡೆದಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಪ್ರಿಯಕರ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಪ್ರೀತಿಗೆ ಜಾತಿ ಅಡ್ಡಿಯಾಗುವುದೆಂದು ಹೆದರಿದ ಪ್ರೀಮಿಗಳು ತಮ್ಮ ಮದುವೆಗೆ ಕುಟುಂಬದವರು‌ ಒಪ್ಪುವುದಿಲ್ಲ ಎಂಬ ಹಿನ್ನಲೆಯಲ್ಲಿ‌ ಮನನೊಂದ ಇಬ್ಬರು ವಿಷ ಸೇವಿಸಿದ್ದರು.

ಚೋರಡಿ‌ ಸಮೀಪದ‌ ರಾಮನಗರ ವಾಸಿಗಳಾದ ಶ್ರೀನಿವಾಸ್ (23) ಹಾಗು ವೀಣಾ (21) ವಿಷ ಸೇವಿಸಿದ ಪ್ರೇಮಿಗಳಾಗಿದ್ದು, ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಕರ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ.

ಶ್ರೀನಿವಾಸ್ ಮತ್ತು ವೀಣಾ ಬೇರೆ ಬೇರೆ ಜಾತಿಯಾದ ಕಾರಣ ಮದುವೆಗೆ ಎರಡು ಕುಟುಂಬಗಳು‌ ಒಪ್ಪುವುದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಬಂದಿದ್ದು, ನಿನ್ನೆ ಹೊರಬೈಲಿಗೆ ಹೋಗುವ ಮಾರ್ಗದ ಹೆಗ್ಗನಕೆರೆ ಬಳಿ‌ ಇಬ್ಬರು ವಿಷ ಸೇವಿಸಿದ್ದರು. ಸ್ಥಳೀಯರು‌ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶ್ರೀನಿವಾಸ್ ಪರಿಸ್ಥಿತಿ ಗಂಭಿರವಾಗಿತ್ತು. ಇಂದು ಬೆಳಿಗ್ಗೆ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ.

ಈ ಘಟನೆ ಸಂಬಂಧ ಕುಂಸಿ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ‌ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here