ಪ್ರೀತಿಸುವಂತೆ ನೆರೆಮನೆಯವನ ಕಿರುಕುಳ ; ಹೊಸನಗರ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ !!

0
9394

ಹೊಸನಗರ: ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ಪಟೇಲ್ ಈಶ್ವರಪ್ಪ ಗೌಡರ ಪುತ್ರಿ ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿದ್ಯಾಶ್ರೀ (21) ರವರು ಅವರ ನೆರೆಮನೆಯಾತ ಮಹೇಶಗೌಡ ಎಂಬವವರ ಪುತ್ರ ಶಶಾಂಕ್ ಎಂಬಾತನು ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದ ಹಿನ್ನಲೆಯಲ್ಲಿ ವಿದ್ಯಾಶ್ರೀ ಕಳೆದ ತಿಂಗಳು ಏಪ್ರಿಲ್ 19ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆತ್ನಿಸಿದ ಕಾರಣ ಮನೆಯವರು ಆಕೆಯನ್ನು ತಕ್ಷಣ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಉನ್ನತ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದ ಬಗ್ಗೆ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಶ್ರೀ ಸಹೋದರ ಕೆ‌‌.ಈ ರಕ್ಷಿತ್ ಇಂದು ಹೊಸನಗರ ಆರಕ್ಷಕ ಠಾಣೆಗೆ ದೂರು ನೀಡಿ ತನ್ನ ತಂಗಿಯ ಸಾವಿಗೆ ಕಾರಣರಾದ ಶಶಾಂಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪಟೇಲ್ ಈಶ್ವರಪ್ಪ ಗೌಡರಿಗೆ ಓರ್ವ ಪುತ್ರ, ಓರ್ವಳು ಪುತ್ರಿ ಇದ್ದು ಪ್ರೀತಿಯ ಹೆಣ್ಣುಮಗಳ ದುರಂತ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.

ಠಾಣೆಗೆ ನೀಡಿದ ದೂರಿನ ಸಾರಾಂಶ:

ನನ್ನ ತಂಗಿ ವಿದ್ಯಾಶ್ರೀ ರವರು ಹೊಸನಗರ ಕೊಡಚಾದ್ರಿ ಕಾಲೇಜಿನಲಿ, ಬಿ.ಕಾಂ ವಾಸಾಂಗ ಮಾಡುತ್ತಿದ್ದು, ಏ.19 ರಂದು ಬೆಳಿಗ್ಗೆ 7.45 ಗಂಟೆ ಸಮಯಕ್ಕೆ ಮುಖ ತೊಳೆಯಲು ಬಚ್ಚಲು ಮನೆಗೆ ಹೋದಾಗ ವಿದ್ಯಾಶ್ರೀಯು ವಾಂತಿ ಮಾಡುತ್ತಿದ್ದ ಒದಾಡುತ್ತಿದ್ದನ್ನು ನೋಡಿ ಮನೆಯವರನ್ನೆಲ್ಲಾ ಕರೆದು ಉಪಚರಿಸಿದ್ದು ವಿದ್ಯಾಶ್ರೀಯು ಯಾವುದೋ ವಿಷ ಸೇವನೆ ಮಾಡಿರುವಂತೆ ಘಾಟು ವಾಸನೆ ಬಂದಿದ್ದು ತಕ್ಷಣ ಹೊಸನಗರ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದು ನಂತರ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುತ್ತಾರೆ. ನಂತರ ವಿಚಾರ ಮಾಡಲಾಗಿ ವಿದ್ಯಾಶ್ರೀ ಗೆ ಇದೇ ಊರಿನ ವಾಸಿಯಾದ ಶಶಾಂಕ್ ಈತನು ಮೊಬೈಲ್ ಮೂಲಕ ಮತ್ತು ಕಾಲೇಜಿಗೆ ಹೋಗಿ ಬರುವಾಗ ಪ್ರೀತಿ ಮಾಡುವಂತೆ ಹಿಂಬಾಲಿಸಿ, ನನ್ನನ್ನು ಪ್ರೀತಿ ಮಾಡಿಲವೆಂದರೆ ಬೇರೆ ಯಾರನ್ನು ಮದುವೆಯಾಗುತ್ತೀಯೋ ನೋಡುತ್ತೇನೆ ಎಂದು ಬೆದರಿಕೆ ಹಾಕಿ ಮಾನಸಿಕ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದರಿಂದ ಬೇಸತ್ತು ವಿಷ ಸೇವನೆ ಮಾಡಿದ್ದಾಗಿ ನನ್ನ ತಂದೆ ತಾಯಿಯವರ ಬಳಿ ತಿಳಿಸಿದ್ದು, ಈ ಬಗ್ಗೆ ಹೆಣ್ಣುಮಗಳ ಭವಿಷ್ಯದ ದೃಷ್ಟಿಯಿಂದ ಅವರ ಮನೆಯವರೆಲ್ಲಾ ಊರಿನಲ್ಲಿ ಬಗೆಹರಿಸಿಕೊಳ್ಳೋಣವೆಂದು ಮಾತನಾಡಿಕೊಂಡು ದೂರು ನೀಡದೇ ಇದ್ದು ನಂತರ ನನಗೆ ಇಂದು ಬೆಳಗಿನ ಜಾವ 03.00 ಗಂಟೆಗೆ ನನ್ನ ತಂದೆ ಪೋನ್ ಮಾಡಿ ವಿದ್ಯಾಶ್ರೀಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದರಿಂದ, ತನ್ನ ತಂಗಿಯ ವಿದ್ಯಾಶ್ರೀಯ ಸಾವಿಗೆ ಕಾರಣನಾದ ಶಶಾಂಕ್ ನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೃತಳ ಸಹೋದರ ರಕ್ಷಿತ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂತಾಪ :

ತಮ್ಮ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿದ್ಯಾಶ್ರೀ ದುರಂತ ಸಾವಿಗೆ ಕಾಲೇಜ್ ಬೋಧಕ ಮಂಡಳಿ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here