ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ‘ವಿ ದಿ ಪೀಪಲ್ ಆಫ್ ಇಂಡಿಯಾ’ ನಾಟಕ

0
185

ಚಿಕ್ಕಮಗಳೂರು: ಸಂವಿಧಾನಕ್ಕೆ ನಾವು ಎನನ್ನು ಸಹ ಕೊಡುವುದು ಅಗತ್ಯ ಇಲ್ಲ. ಅದಕ್ಕೆ ಗೌರವವನ್ನು ನೀಡುವ ಮೂಲಕ ಅಲ್ಲಿನ ಕಾನೂನು ಕಟ್ಟಲೆಗಳನ್ನು ಜಾರಿಗೆ ತಂದರೆ ಸಾಕು ರಾಷ್ಟ್ರ ಉತ್ತಮವಾಗಿರುತ್ತದೆ ಎಂದು ಚಿಕ್ಕಮಗಳೂರು ಹಿರಿಯ ಉಪ ವಿಭಾಗಾಧಿಕಾರಿ ಡಾ. ಹೆಚ್. ಎಲ್ ನಾಗರಾಜ್ ಅಭಿಪ್ರಾಯಿಸಿದರು.

ಅಭಿನಯ ದರ್ಪಣ ಯುವ ವೇದಿಕೆ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ದಿ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶವನ್ನು ಉದ್ಘಾಟಿಸಿ ಮಾತನಾಡಿದ ಅವರು. ಇವತ್ತು ಇನ್ನು ಅನೇಕ ದೊಡ್ಡ ದೊಡ್ಡ ಮಂದಿಗೆ ಸಂವಿಧಾನದ ಬಗ್ಗೆ ಅದರಲ್ಲಿರುವ ವಿಷಯಗಳ ಬಗ್ಗೆ ತಿಳಿಯದಿರುವುದು ವಿಷಾದನೀಯ ಸಂಗತಿ. ಇಂತಹ ಸಂದರ್ಭದಲ್ಲಿ ಈ ರೀತಿಯ ನಾಟಕ ಪ್ರದರ್ಶನ ಅವಶ್ಯಕತೆ ಇದೆ ಎಂದು ತಿಳಿಸಿದರು.

ನಮ್ಮ ರಾಷ್ಟ್ರದಲ್ಲಿ ಈ ರೀತಿಯ ಸಂವಿಧಾನ ರಚನೆಯಾಗದಿದ್ದರೆ ನಾವ್ಯಾರು ಇವತ್ತು ನಾಟಕ ನೋಡಲು ಸಾಧ್ಯವಾಗುತ್ತಿರಲಿಲ್ಲ. ಯಾರದ್ದೋ ಶ್ರೀಮಂತರ ಮನೆಯ ಮುಂದೆ ಸಗಣಿ ಎತ್ತ ಬೇಕಿತ್ತು. ನಮಗೆ ಇವತ್ತು ಈ ರೀತಿಯ ಸ್ವಾತಂತ್ರ್ಯ ಸಿಕ್ಕಿರುವುದು ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.

ಮನೋರೋಗ ಚಿಕಿತ್ಸಕರಾದ ಮಮತಾ ಮಾತನಾಡಿ. ಭಾರತ ಬಹುತ್ವವನ್ನು ಒಳಗೊಂಡಿರುವ ವಿಶಿಷ್ಟ ದೇಶ. ಇಲ್ಲಿ ಒಂದೇ ಭಾಷೆ, ಧರ್ಮ, ಆಹಾರ ಪದ್ದತಿ ಇರಲಿಲ್ಲ. ಇಂತಹ ವಿಭಿನ್ನವಾದ ಸಂಸ್ಕೃತಿ ಇರುವ ದೇಶದ ಸಂವಿಧಾನವನ್ನು ರಚಿಸಬೇಕಾದರೆ ಭಾರತದ ಹೃದಯ, ಆತ್ಮವನ್ನು ಅರ್ಥಮಾಡಿಕೊಂಡು ಸಂವಿಧಾನವನ್ನು ಸೂಕ್ಷ್ಮವಾಗಿ ರಚಿಸುವಂತಹ ವ್ಯಕ್ತಿ ಬೇಕಿತ್ತು ಅದನ್ನು ನಿರ್ವಹಿಸುವಲ್ಲಿ ಸಂವಿಧಾನ ರಚನಾ ಸಮಿತಿ ಹಾಗೂ ಅಂಬೇಡ್ಕರ್ ಯಶಸ್ವಿಯಾಗುವ ಜೊತೆಗೆ ಇಡೀ ದೇಶದ ಜನರನ್ನು ತಾಯ್ತಾನದಿಂದ ಕಾಳಜಿವಹಿಸುವಂತಹ ಸಂವಿಧಾನವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಈ ರೀತಿಯ ನಾಟಕ ಯುವಸಮುದಾಯಕ್ಕೆ ತಲುಪುವಂತದ್ದು ಬಹುಮುಖ್ಯವಾಗಿದೆ. ಇಂತಹ ನಾಟಕಗಳನ್ನು ಯುವಕರು ನೋಡಬೇಕು. ಈ ರೀತಿಯ ವಿಭಿನ್ನ ನಾಟಕಗಳು ಚಿಕ್ಕಮಗಳೂರಿನಲ್ಲಿ ಪ್ರದರ್ಶನ ಮಾಡುವಲ್ಲಿ ನಮ್ಮೂರಿನ ಉತ್ಸಾಹಿ ಹುಡುಗರು ಯಶಸ್ವಿಯಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಸಂವಿಧಾನದ ಆಶಯಗಳು ಮುಂದಿನ ಪೀಳಿಗೆಗೆ ತಲುಪುವ ನಿಟ್ಟಿನಲ್ಲಿ ಇಂತಹ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳಬೇಕೆಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿದರು, ವಿನೀತ್ ನೀನಾಸಂ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

ಶಿವಮೊಗ್ಗ ರಂಗಾಯಣದ ಕಲಾವಿದರು ಸತತ ಒಂದು ಗಂಟೆಗೂ ಹೆಚ್ಚುಕಾಲ ವಿ ದ ಪೀಪಲ್ ಆಫ್ ಇಂಡಿಯಾ ನಾಟಕವನ್ನು ಪ್ರದರ್ಶನ ಮಾಡಿದರು. ನಾಟಕದ ಬಳಿಕ ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here