ಬಡವರ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುವ ಯೋಜನೆ ಅಗ್ನಿಪಥ್ ಅನ್ನು ಕೂಡಲೇ ಹಿಂಪಡೆಯಬೇಕು ; ಗೋಣಿ ಮಾಲತೇಶ್

0
152

ಶಿಕಾರಿಪುರ: ಬಡವರ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುವ ಯೋಜನೆ ಅಗ್ನಿಪಥ್ ಅದನ್ನು ಸರಕಾರ ಕೂಡಲೆ ಹಿಂದಕ್ಕೆ ಪಡೆಯಬೇಕು ಅಲ್ಲಿಯವರೆಗೂ ಕಾಂಗ್ರೆಸ್ ಹೋರಾಟ ಮುಂದುವರೆಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಡವರ ಮಕ್ಕಳು ಸೈನ್ಯಕ್ಕೆ ಸೇರುವುದು ಹೆಚ್ಚು ಅವರಿಗೆ ಕೇವಲ ನಾಲ್ಕು ವರ್ಷ ಮಾತ್ರ ಉದ್ಯೋಗ ಭದ್ರತೆ ನೀಡುವ ಅಗ್ನಿಪಥ್ ಯೋಜನೆ ಅವೈಜ್ಞಾನಿಕ ಅದನ್ನು ಕೂಡಲೆ ರದ್ದುಗೊಳಿಸಬೇಕು ಎಂದು ಸಾಕಷ್ಟು ಪ್ರತಿಭಟನೆ ನಡೆಸಿದರೂ ಕೇಂದ್ರ ಹಟಮಾರಿ ಧೋರಣೆ ತಾಳಿರುವುದು ಸರಿಯಲ್ಲ ಕಾಂಗ್ರೆಸ್ ಜನತೆ ಪರವಾಗಿ ಯೋಜನೆ ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಡೆಸಲಿದೆ ಎಂದರು.

ಕಾಂಗ್ರೆಸ್ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ಸೈನ್ಯದಲ್ಲಿ 20ವರ್ಷ ಸೇವಾ ಅವಧಿ ಇತ್ತು ಅದನ್ನು ನಾಲ್ಕು ವರ್ಷಕ್ಕೆ ಇಳಿಸಲಾಗಿದೆ, ಪಿಂಚಣಿ ಸೌಲಭ್ಯ ಕಡಿತಗೊಳಿಸಿದೆ. ಸೈನ್ಯಕ್ಕೆ ಬಡವರೆ ಹೆಚ್ಚು ಸೇರುತ್ತಾರೆ ಬಡ ಮಕ್ಕಳು 4 ವರ್ಷದ ನಂತರ ಏನು ಮಾಡಬೇಕು ಎಂದು ಪ್ರಶ್ನಿಸಿದರಲ್ಲದೆ ಕೇಂದ್ರ ಸರಕಾರ ಕೂಡಲೆ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ನಾಗರಾಜಗೌಡ ಮಾತನಾಡಿ, ದೇಶಕ್ಕಾಗಿ ಜೀವನ ಮುಡಿಪಾಗಿಡುವ ಸೈನಿಕರಿಗೆ ಭವಿಷ್ಯವೆ ಇಲ್ಲದಂತೆ ಮಾಡಿರುವ ಕೇಂದ್ರ ಸರಕಾರ ಮಾತೆತ್ತಿದರೆ ದೇಶಪ್ರೇಮದ ಬಗ್ಗೆ ಮಾತನಾಡುತ್ತದೆ ಮತ್ತೊಂದೆಡೆ ಬಡಮಕ್ಕಳ ಭವಿಷ್ಯವನ್ನೆ ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್, ಡಿಸೇಲ್, ಸಿಲಿಂಡರ್, ಅಡುಗೆ ಎಣ್ಣೆ ಸೇರಿ ಎಲ್ಲ ನಿತ್ಯಬಳಕೆ ವಸ್ತು ದರ ಗಗನಕ್ಕೆ ಏರಿದೆ ಅದನ್ನು ಮುಚ್ಚಿಕೊಳ್ಳುವ ಕಾರಣಕ್ಕೆ ಹಿಂದೂ ಮುಸ್ಲಿಂ ನಡುವೆ ಒಡೆದಾಳುವ ಮಾತನ್ನಾಡಿ ಜನರ ಗಮನ ಬೇರೆಡೆಗೆ ಸೆಳೆಯುತ್ತಿದೆ ಎಂದರು.

ಮುಖಂಡರುಗಳಾದ ಭಂಡಾರಿ ಮಾಲತೇಶ್, ಮಹೇಶ್‌ಹುಲ್ಮಾರ್, ರಾಘವೇಂದ್ರನಾಯ್ಕ, ಉಮೇಶ್ ಮಾರವಳ್ಳಿ, ವಿರೇಶ್, ಮಲ್ಲಿಕನಾಯ್ಕ, ಪರಶುರಾಮ್ ತೊಗರ್ಸಿ, ಬಡಗಿ ಪಾಲಾಕ್ಷಪ್ಪ ಇತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here