ಚಿಕ್ಕಮಗಳೂರು : ನಮ್ಮಗೆ “ಬದುಕಲು ಬಿಡಿ ಇಲ್ಲವೇ ವಿಷ ಕೊಡಿ” ಘೋಷಣೆಯೊಂದಿಗೆ ಬೀದಿಬದಿ ವ್ಯಾಪಾರಿಗಳು ಇಂದು ನಗರದ ಆಜಾದ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನಗರಸಭೆಗೆ ನೂತನ ಆಡಳಿತ ಜಾರಿಗೆ ಬಂದ ನಂತರ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಿದ್ದು ಕಳೆದ 10 ದಿನಗಳಿಂದ ವ್ಯಾಪಾರವೇ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ತಮಗೆ ಗುರುತಿನ ಚೀಟಿಯನ್ನು ನೀಡಿದ್ದು ಸಾಲ ಮಾಡಿ ಪ್ರತಿ ದಿನ ವ್ಯಾಪಾರ ನಡೆಸುತ್ತಿದ್ದು ಈಗ ಏಕಾಏಕಿ ವ್ಯಾಪಾರಕ್ಕೆ ಬ್ರೇಕ್ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಬೀದಿ ಬದಿಗಳಲ್ಲಿ ತಳ್ಳು ಗಾಡಿಗಳ ಮೂಲಕ ಒಂದಿಷ್ಟು ವ್ಯವಹಾರ ನಡೆಯುತ್ತದೆ, ಆದರೆ ಸಂತೆ ಒಳಗೆ ಇಟ್ಟುಕೊಂಡು ವ್ಯಾಪಾರ ಮಾಡುವುದು ಅಸಾಧ್ಯ ಎಂದು ಹೇಳಿದ್ದಾರೆ.

ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರ ಧೋರಣೆಯಿಂದ ನೂರಾರು ಬೀದಿ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ.
ಈ ಹಿಂದಿನಂತೆ ವಹಿವಾಟು ನಡೆಸಲು ಅನುಮತಿ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯನ್ನು ಸಂಘದ ಅಧ್ಯಕ್ಷ ಸುಮೇರ್ಖಾನ್, ಧನುನಾಯಕ್ ನೇತೃತ್ವದಲ್ಲಿ ನಡೆಸಲಾಯಿತು.
Related
You cannot copy content of this page