ಬದುಕಿಗೆ ಬಹುದೊಡ್ಡ ಕೊಡುಗೆ ಸಂಗೀತ: ಎಸ್.ಎಸ್. ವೆಂಕಟೇಶ್

0
109

ಚಿಕ್ಕಮಗಳೂರು: ಬದುಕಿಗೆ ಬಹುದೊಡ್ಡ ಕೊಡುಗೆ ಸಂಗೀತ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್. ಎಸ್. ವೆಂಕಟೇಶ್ ಹೇಳಿದರು. ‍

ನಗರದ ರತ್ನಗಿರಿ ರಸ್ತೆಯ ಶ್ರೀ ರಾಮ ಮಂದಿರ ದೇವಸ್ಥಾನದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ, ಯುರೇಕಾ ಅಕಾಡೆಮಿ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಾಗೂ ಗಾಯತ್ರಿ ಶಾಮಿಯಾನ ಎಲ್ಲರ ಸಹಕಾರದಲ್ಲಿ ನಡೆದ ವಿಶ್ವ ಸಂಗೀತ ದಿನದ ವಿಶೇಷ ಕಾರ್ಯಕ್ರಮ ರಾಗ್‍ರಂಗ್ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿ ಸಂಗೀತವಿದೆ. ಯಾವುದೇ ಗಡಿ, ಭಾಷೆ, ಧರ್ಮದ ಯಾವುದೇ ಗಳಿಲ್ಲದೆ ಸಂಗೀತ ಹೃದಯದ ಭಾಷೆ, ನೊಂದ ಮನಕ್ಕೆ ಸಾಂತ್ವನ ನೀಡುವಂತಹ ಭಾರತೀಯ ಸಂಗೀತಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.

ಯಾವ ವ್ಯಕ್ತಿಗೆ ಸಂಸ್ಕಾರ ಇಲ್ಲವೋ ಅಂತವರು ಎಂತಹ ದುಬಾರಿ ಬಟ್ಟೆತೊಟ್ಟರು ನಗ್ನನಾಗಿದ್ದಂತೆ ಆ ವ್ಯಕ್ತಿ ಎಲ್ಲಿದ್ದರೂ ನಾಗಣ್ಯ. ವಿದ್ಯಾಭ್ಯಾಸದ ಜೊತೆಗೆ ಕಲಿಕೆಗೆ ಸರ್ಕಾರವೇ ಒತ್ತು ನೀಡಬೇಕು ಎಂದು ಹೇಳಿದರು.

ನಾರಾಯಣ ಮಲ್ಯ ಮಾತನಾಡಿ ವಿಶ್ವ ಸಂಗೀತ ದಿನ ಹಾಗೂ ಅಂತರಾಷ್ಟ್ರೀಯ ಯೋಗ ದಿನ ಒಂದೇ ದಿನ ಬಂದಿರುವುದು ಯೋಗ ಯೋಗವೇ ಸರಿ, ಅತಿ ದೀರ್ಘವಾದ ಈ ದಿನ ಸಂಗೀತದ ಶ್ರವಣ, ಕೀರ್ತನ, ಧ್ಯಾನ ಮಾಡುವುದು ನಮ್ಮ ಭಾರತೀಯ ಪರಂಪರೆ ಎಂದರು.

ಯುರೇಕಾ ಅಕಾಡೆಮಿಯ ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶತಶತಮಾನಗಳಿಂದ ಸಂಗೀತ ಮತ್ತುಯೋಗ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಎರಡರಲ್ಲೂ ನಿರಂತರ ಸಾಧನೆ ಅತಿ ಮುಖ್ಯ ಎಂದರು.

ಪ್ರತಿ ವರ್ಷ ಪೂರ್ವಿ ಸುಗಮ ಸಂಗೀತ ಅಕಾಡೆಮಿ ವಿಶ್ವ ಸಂಗೀತ ದಿನದಂದು ಕಲಾವಿದರನ್ನು ಗೌರವಿಸುವ ಪರಿಪಾಠ ಮಾಡಿಕೊಂಡಿದೆ. ಈ ವರ್ಷ ಚಿಕ್ಕಮಗಳೂರಿನ ಹಿರಿಯ ಕೀಬೋರ್ಡ್ ವಾದಕ ನಾಗಭೂಷಣ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ಸಂಗೀತ ದಿನದ ಅಂಗವಾಗಿ ಈ ಬಾರಿ ಪೂರ್ವಿತಂಡ ಮೂರು ಶಾಸ್ತ್ರೀಯ ರಾಗಗಳನ್ನು ಆಧರಿಸಿದ ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಚಲನಚಿತ್ರ ಗೀತೆಗಳನ್ನು ಹಾಡಿದ್ದು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗನ್ನು ತಂದಿತು. ಎಂ. ಎಸ್. ಸುಧೀರ್ ಮತ್ತು ಸುಮಾಪ್ರಸಾದ್ ಅವರು ದರ್ಬಾರಿ, ಯಮನ್ ಮತ್ತು ಭೀಮಪಲಾಸ್ ರಾಗಗಳ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು.

ಪೂರ್ವದ ತಂಡದ ಗಾಯಕರಾದ ರಾಯ ನಾಯಕ್, ಎಂ. ಎಸ್. ಸುಧೀರ್, ಚೈತನ್ಯ, ರೂಪ ಅಶ್ವಿನ್, ಲಾಲಿತ್ಯಅಣ್ವೇಕರ್, ಪ್ರಣಮ್ಯ ಕಶ್ಯಪ್, ಅನುರಾಧ ಭಟ್, ಸ್ವಾತಿ ನಾಯಕ್, ಶ್ವೇತಾ ಭಾರದ್ವಾಜ್, ಕನ್ನಡ, ತಮಿಳು, ತೆಲಗು, ಹಿಂದಿ ಗೀತೆಗಳನ್ನು ಹಾಡಿದ್ದು ಸಂಗೀತ ಆಸಕ್ತರ ಮನಗೆದ್ದಿತು.

ಜಾಹಿರಾತು

LEAVE A REPLY

Please enter your comment!
Please enter your name here