‘ಬದುಕು ಬದುಕಲು ಬಿಡು ಬದುಕಲು ಪರರಿಗೆ ಸಹಕರಿಸು’ ಎನ್ನುವ ಮಹಾವೀರ ಉಪದೇಶವು ಪ್ರಸ್ತುತ ಸನ್ನಿವೇಶದಲ್ಲಿ ಔಚಿತ್ಯ ಪೂರ್ಣವಾಗಿದೆ: ತಹಶೀಲ್ದಾರ್ ವಿ.ಎಸ್. ರಾಜೀವ್

0
243

ಹೊಸನಗರ: ಬದುಕು ಬದುಕಲು ಬಿಡು ಬದುಕಲು ಪರರಿಗೆ ಸಹಕರಿಸು ಎನ್ನುವ ಮಹಾವೀರ ತೀರ್ಥಂಕರರ ಉಪದೇಶವು ಪ್ರಸ್ತುತ ಸನ್ನಿವೇಶದಲ್ಲಿ ಔಚಿತ್ಯಪೂರ್ಣವಾಗಿದೆ 24ನೇ ತೀರ್ಥಂಕರರು ಭೂದಿಸಿದ ಜೀವನಧರ್ಮದ ಸಂದೇಶಗಳು ಸರ್ವಮಾನ್ಯವಾಗಿದೆ ಎಂದು ಹೊಸನಗರ ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಹೇಳಿದರು.

ಹೊಸನಗರ ತಾಲ್ಲೂಕು ಕಛೇರಿಯ ಆವರಣದಲ್ಲಿ ಮಹಾವೀರ ತೀರ್ಥಂಕರರ ಜಯಂತಿಯನ್ನು ಆಚರಿಸಲಾಗಿದ್ದು ತೀರ್ಥಂಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಜೀವಾನಾಮ ಎಂದರೆ ಪರಸ್ವರ ಭ್ರಾತೃತ್ವ ಭಾವವು ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆಯನ್ನು ರಕ್ಷಿಸುತ್ತದೆ ಎಂದ ಮಹಾವೀರರು ಜೈನಧರ್ಮಸಾರವು ಪ್ರತಿಯೋರ್ವರ ಕಲ್ಯಾಣ ಮಾರ್ಗವನ್ನು ತೋರಿಸುವುದೆಂದ ಮಹಾವೀರರು ಗ್ರಾಮ-ಗ್ರಾಮಗಳಿಗೆ ತೆರಳಿ ಜೀವನ ಧರ್ಮದ ಮರ್ಮವನ್ನು ಸವಿಸ್ತಾರವಾಗಿ ಪ್ರಚಾರ ಪಡಿಸುವುದರ ಜೊತೆಗೆ ಪ್ರಕೃತಿಯ ಪ್ರತಿಯೊಂದು ಜೀವಿಗೂ ನೋವನ್ನುಂಟು ಮಾಡಬಾರದೆಂದು ಹೇಳಿ ಅಹಿಂಸಾತ್ಮಕ ದಿನಚರ್ಯೆ ಪಾಲನೆಗೆ ಒತ್ತು ನೀಡಿದವರು ಮಹಾವೀರರು ಎಂದರು.

ಈ ಸಂದರ್ಭದಲ್ಲಿ ಗ್ರೇಡ್2ತಹಶೀಲ್ದಾರ್ ರಾಕೇಶ್, ವಾಲ್ಮೀಕಿ ಜನಾಂಗದ ಅಧ್ಯಕ್ಷ ಎಸ್.ಹೆಚ್.ನಿಂಗಮೂರ್ತಿ, ಚಂದ್ರಬಾಬು, ಆರ್.ಐ ವೆಂಕಟೇಶ್‌ಮೂರ್ತಿ, ಹುಚ್ಚರಾಯಪ್ಪ, ಆರೋಗ್ಯಾಧಿಕಾರಿ ಪ್ರಶಾಂತ್, ಗುಲಾಬಿ ಮರಿಯಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here