ಬರೋಬ್ಬರಿ ಮೂರೂವರೆ ದಶಕಗಳ ನಂತರ ಏ. 10 ರಂದು ಮತ್ತೆ ವಿಜೃಂಭಿಸಲಿದೆ ನಗರದ ಗುಜರಿಪೇಟೆ ಶ್ರೀ ವೆಂಕಟರಮಣ ದೇವರ ರಥೋತ್ಸವ !

0
630

ಹೊಸನಗರ: ಇತಿಹಾಸ ಪ್ರಸಿದ್ಧ ತಾಲೂಕಿನ ನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುಜರಿಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಏ. 10 ರಂದು ಸಮಾಜ ಬಾಂಧವರ ಸಂಘಟನೆಯೊಂದಿಗೆ ಮೂರುವರೆ ದಶಕಗಳ ನಂತರ ಮತ್ತೆ ವಿಜೃಂಭಿಸಿಲಿರುವುದಾಗಿ ಸಮಾಜ ಬಾಂಧವರು ತಿಳಿಸಿದ್ದಾರೆ.

ತಾಲೂಕಿನ ಹಲವು ವಿದ್ಯುತ್ ಯೋಜನೆಗಳಿಂದಾಗಿ ಈ ಭಾಗದ ಜನರು ಸಂಕಷ್ಟಕ್ಕೊಳಗಾಗಿದ್ದ ಕಾರಣ ಸಂಘಟನೆ ಕಷ್ಟಕರವಾಗಿತ್ತು. ಇದೀಗ ಸಮಾಜ ಬಾಂಧವರು ಆರ್ಥಿಕವಾಗಿ ಸಬಲ ಪರಿಸ್ಥಿತಿ ಕಂಡುಕೊಳ್ಳುತ್ತಿರುವ ಕಾರಣ ಸಂಘಟಿತರಾಗಿ ಕಳೆದ ಮೂರುವರೆ ದಶಕಗಳ ಕಾಲ ಸ್ಥಗಿತಗೊಂಡಿದ್ದ ಶ್ರೀಮನ್ಮಹಾರಥೋತ್ಸವವನ್ನು ಸಮಾಜ ಬಾಂಧವರ ಸಂಘಟನೆಯಿಂದ ಪುನರಾರಂಭಿಸಲು ನಿರ್ಧರಿಸಿದ್ದಾರೆ.

ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಚೈತ್ರ ಶುಕ್ಲ ನವಮಿ ಏ. 10 ರ ಭಾನುವಾರ ಶ್ರೀ ರಾಮನವಮಿ ಶುಭದಿನದಂದು ಶ್ರೀ ವೆಂಕಟರಮಣ ಸ್ವಾಮಿ ದೇವರ ಶ್ರೀಮನ್ ಮಹಾರಥೋತ್ಸವ ಚೈತ್ರ ಶುಕ್ಲ ದಶಮಿ, ಏ. 11 ರ ಸೋಮವಾರ ವರ್ಧಂತ್ಯುತ್ಸವ ನಡೆಯಲಿರುವುದಾಗಿ ಉತ್ಸವ ಸಮಿತಿಯ ಎನ್. ಸುರೇಶ್ ಭಟ್, ಕೆ. ಭಾಸ್ಕರ ಭಟ್, ರಾಘವೇಂದ್ರ, ನಾರಾಯಣ ಕಾಮತ್ ಮತ್ತಿತರರು ತಿಳಿಸಿದ್ದಾರೆ.

ಏ. 10 ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಪೂಜಾ ವಿಧಿವಿಧಾನ, ಅಪರಾಹ್ನ 12ಕ್ಕೆ ಶ್ರೀ ಮನ್ಮಹಾರಥೋತ್ಸವ ಸಂಜೆ 7ಕ್ಕೆ ಸಂಜೆ ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ವಸಂತ ಪೂಜೆ ಹಾಗೂ ಏ. 11ರಂದು ಸೋಮವಾರ ವರ್ದಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌.

ಭಕ್ತ ವೃಂದದವರು ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಕ್ಷಿಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here