ಬಸ್ಸಿನಿಂದ ಬಿದ್ದು ಯುವತಿಯ ಮೆದುಳು ನಿಷ್ಕ್ರಿಯ ಪ್ರಕರಣ ; ಹೆಲಿಕಾಪ್ಟರ್ & ಆ್ಯಂಬುಲೆನ್ಸ್ ಮೂಲಕ ಅಂಗಾಂಗ ರವಾನೆ

0
738

ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ಯುವತಿ ರಕ್ಷಿತಾಳ ಮೆದುಳು ನಿಷ್ಕ್ರಿಯ ಪ್ರಕರಣ ಸಂಬಂಧ ಅಂಗಾಂಗಗಳನ್ನು ಏರ್ ಲಿಫ್ಟ್ ಹಾಗೂ ಆ್ಯಂಬುಲೆನ್ಸ್ ಮೂಲಕ ರವಾನಿಸಲಾಗಿದ್ದು ಸಾವಿನಲ್ಲೂ ರಕ್ಷಿತಾ ಸಾರ್ಥಕತೆ ಮೆರೆದಿದ್ದಾಳೆ.


ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯದ ಯುವತಿ ರಕ್ಷಿತಾ ಚಿಕ್ಕಮಗಳೂರು ನಗರದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮನೆಗೆ ಹೋಗುವಾಗ ಬಸ್ಸಿನಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯವಾಗಿತ್ತು. ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಮಾಡಲಾಗಿದೆ.


ರಕ್ಷಿತಾಳ ಅಂಗಾಂಗಗಳನ್ನ ಶಸ್ತ್ರಚಿಕಿತ್ಸೆ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಹೊರತೆಗೆದಿದ್ದು ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್, ಕಣ್ಣುಗಳನ್ನ ವೈದ್ಯರು ಹೊರತೆಗೆದಿದ್ದಾರೆ.


ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಕಿಡ್ನಿಗಳನ್ನ ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ರವಾನೆ ಮಾಡಲಾಯಿತು.


ಕಣ್ಣುಗಳನ್ನು ಚಿಕ್ಕಮಗಳೂರು ಆಸ್ಪತ್ರೆಯಲ್ಲೇ ವೈದ್ಯರು ಇರಿಸಿಕೊಂಡಿದ್ದಾರೆ. ಇದರಿಂದ ಇದೇ ಮೊದಲ ಬಾರಿಗೆ ಅಪರೂಪದ ಕ್ಷಣಕ್ಕೆ ಕಾಫಿನಾಡು ಸಾಕ್ಷಿಯಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here