ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಕಾಲಿಕ ಸತ್ಯಗಳನ್ನು ಯಾರು ಮರೆಮಾಚಲು ಸಾಧ್ಯವಿಲ್ಲ: ಎನ್.ಆರ್. ದೇವಾನಂದ್

0
343

ಹೊಸನಗರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಕಾಲಿಕ ಸತ್ಯಗಳನ್ನು ಯಾರು ಮರೆಮಾಚಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಅಂಬೇಡ್ಕರ್ ನಿಗಮದ ನಿರ್ದೆಶಕರಾದ ಎನ್ ಆರ್ ದೇವಾನಂದ್‌ರವರು ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಇಲಾಖೆ ಎಲ್ಲ ದಲಿತ ಸಂಘರ್ಷ ಸಮಿತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್‌ರವರ 131ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ|| ಬಿ.ಆರ್ ಅಂಬೇಡ್ಕರ್‌ರವರು ಶ್ರೇಣಿಕೃತ ಸಮಾಜದ ಅತೀ ತಳ ಸಮುದಾಯದಲ್ಲಿ ಜನಿಸಿದದವರು ಅಸಹಿಷ್ಣುತೆ, ಅಸ್ಪೃಶ್ಯತೆಗಳನ್ನು ಅನುಭವಿಸಿದವರು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಪರಿಹಾರಗಳಿಗಾಗಿ ತಮ್ಮ ಜೀವನವನ್ನೆ ಸವೆಸಿದವರು. ಅಂದಿನ ಕಠೋರ ಜಾತಿ ತಾರತಮ್ಮಯಗಳ ಜೊತೆ ಸೆಣಸಾಡಲು ಅನಿಷ್ಟ ಪದ್ದತಿಗಳ ಜನರನ್ನು ಮುಕ್ತಗೊಳಿಸಲು ಅವರು ಪಟ್ಟ ಶ್ರಮ ಅಷ್ಟಿಸ್ಟಲ್ಲ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಅವರು ಚಿಂತಿಸದ ವಿಷಯಗಳೇ ಇರಲಾರದು ಅವರ ಚಿಂತನೆಗಳು ಅವರು ಅನುಭವಿಸಿದ ಯಾತನೆಗಳು ನಮ್ಮ ದೇಶ ಕಂಡು ಬಂದ ನ್ಯಾನತೆಗಳೇ ಕಾರಣವೆಂದರೆ ತಪ್ಪಾಗಲಾರದು ಅವರ ಓದುವ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಅಲ್ಪ ಪ್ರಮಾಣದಲ್ಲಿತ್ತು ಜನರಲ್ಲಿ ತಿಳುವಳಿಕೆ ಇರಲಿಲ್ಲ ಜನರಲ್ಲಿ ಸಾಮಾನತೆಯ ಕೊರತೆ ಇದ್ದಿದ್ದರಿಂದ ಮೇಲು ಕೀಳು ಎಂಬ ಭಾವನೆ ಜನರಲ್ಲಿ ಮೂಡಿತ್ತು ಕಾಲ ಬದಲಾದಂತೆ ಇಂದು ಶಿಕ್ಷಣದ ಗುಣ ಮಟ್ಟ ಉತ್ತಮ ಸ್ಥಿತಿಯಲ್ಲಿದೆ ಯಾವ ದೇಶದಲ್ಲಿ ಶಿಕ್ಷಣದ ಗುಣ ಮಟ್ಟ ಹೆಚ್ಚಿರುತ್ತದೆಯೋ ಅಲ್ಲಿ ಮೇಲು ಕೀಳು ಅಸ್ಪೃಶ್ಯತೆ ಎಂಬ ವಿಷಯವಾಗಿ ಚರ್ಚೆಯಾಗುವುದಿಲ್ಲ ಸರ್ಕಾರಗಳು ಹಿಂದುಳಿದ ಜನಾಂಗದ ಏಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವವಾದ ಬದಲಾವಣೆಗಳನ್ನು ತರಲಾಗಿದೆ. ಇಂಥಹ ಮೂಡನಂಬಿಕೆ ಅಸ್ವೃಶ್ಯತೆಯನ್ನು ನಮ್ಮ ದೇಶದಿಂದ ಕಿತ್ತು ಹಾಕಬೇಕಾದರೆ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ವರ್ಗ ತಾರತಮ್ಯ ಮಾಡುವುದನ್ನು ಬಿಟ್ಟು ಎಲ್ಲರೂ ಒಂದೇ ಈ ದೇಶದ ಮಕ್ಕಳು ಇಲ್ಲಿ ಜಾತಿ ಮತ ಬೇಧಗಳಿಗೆ ಅವಕಾಶ ನೀಡಬಾರದು ಎಂದು ಪಣ ತೊಟ್ಟರೇ ಖಂಡಿತವಾಗಿಯು ಈ ದೇಶದಲ್ಲಿ ಸಮಾನತೆಯಿಂದ ಬಾಳ್ವೆ ಮಾಡಬಹುದೆಂದರು.

ಡಾ|| ಅಂಬೇಡ್ಕರ್‌ರವರಿಗೆ ಇದ್ದ ತಾಳ್ಮೆ ಸಹಿಷ್ಣುತೆ, ಅಹಂಕಾರ ರಹಿತ ನಿಷ್ಟುರವಾದ ನಡತೆ ಪ್ರಬುದ್ದ ಚಿಂತನೆಗಳು ಹೇಳಿಕೆಗಳು ಮತ್ತು ರಾಜಿ ಇಲ್ಲದ ಜೀವನ ಹೇಗೆ ಅವರಿಂದ ಕಲಿತದ್ದು ಜೀವನದಲ್ಲಿ ಅಳವಡಿಸಿಕೊಂಡು ಯಾವುದು ಎಂದು ಒಮ್ಮೆ ಹುಡುಕಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕಾಗಿದ್ದು ಅವರ ತತ್ವ ಸಿದ್ಧಾಂತಗಳನ್ನು ಓದಿ ತಿಳಿದು ಮೈಗೂಡಿಸಿಕೊಂಡು ಜೀವನ ಸಾಗಿಸೋಣ ಎಂದು ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಈ ಸಂದರ್ಭದಲ್ಲಿ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಆರೋಗ್ಯಾಧಿಕಾರಿ ಪ್ರಶಾಂತ್, ಇಂಜಿನೀಯರ್ ಗಣೇಶ್ ಹೆಗ್ಡೆ, ಕೃಷ್ಣವೇಣಿ, ತಾಲ್ಲೂಕು ಕಛೇರಿಯ ಗ್ರೇಡ್2ತಹಶೀಲ್ದಾರ್ ರಾಕೇಶ್, ಆರ್.ಐ ವೆಂಕಟೇಶ್ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ನಂದಿನಿ, ಪ್ರಥಮ ದರ್ಜೆ ಗುಮಾಸ್ಥರಾದ ಸರೋಜಿನಿ, ವಾರ್ಡನ್ ರಾಘವೇಂದ್ರ, ಕಲ್ಪನ, ವಾಲ್ಮೀಕಿ ಜನಾಂಗದ ಅಧ್ಯಕ್ಷರಾದ ಎಸ್.ಹೆಚ್.ನಿಂಗಮೂರ್ತಿ, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರಶೇಟ್, ಉಪನೋಂದಾಣಾಧಿಕಾರಿ ರುದ್ರಪ್ಪ, ಹುಚ್ಚರಾಯಪ್ಪ, ಗ್ರಾಮ ಲೆಕ್ಕಿಗಾ ಕೌಶಿಕ್, ಹರೀಶ್, ಉಮೇಶ್, ಮಂಜಪ್ಪ, ಡಾ|| ಸುಧಾಕರ್, ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ಇನ್ನೂ ಮುಂತಾದವರು ಉಪಸ್ಥಿತರಿದ್ದು ಡಾ|| ಅಂಬೇಡ್ಕರ್‌ರವರ ಬಗ್ಗೆ ಮಾತನಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here