ಬಾರ್’ನಲ್ಲಿ ಮದ್ಯದ ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ: ಬಿಯರ್ ಬಾಟಲಿಯಿಂದ ಗ್ರಾಹಕನಿಗೆ ಹಲ್ಲೆ !

0
3067

ಶಿವಮೊಗ್ಗ: ಬಾರ್’ನಲ್ಲಿ ನೌಕರರೊಂದಿಗೆ ಮದ್ಯದ ಹಣದ ವಿಚಾರದಲ್ಲಿ ಇಬ್ಬರು ಗ್ರಾಹಕರು ಹೊಡೆದಾಡಿಕೊಂಡಿದ್ದು ಗ್ರಾಹಕನಿಗೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿನ್ನೆ ಆಯನೂರು ಸರ್ಕಲ್ ಬಳಿಯಿರುವ ಕಲ್ಬಿಗಿರಿ ಬಾರ್ಗೆ ಶಿವಮೊಗ್ಗ ತಾಲೂಕು ಮಂಜರಿಕೊಪ್ಪದ ಹರೀಶ್ (24) ತನ್ನ ಸ್ನೇಹಿತ ಮಂಜುನಾಥನೊಂದಿಗೆ ಮದ್ಯ ಸೇವನೆಗೆಂದು ತೆರಳಿದ್ದಾನೆ. ಮದ್ಯದ ಹಣದ ವಿಚಾರದಲ್ಲಿ ಬಾರ್ ಕೆಲಸಗಾರ ಅನಿಲ್ ಮತ್ತು ಹರೀಶ್ ಸ್ನೇಹಿತ ಮಂಜುನಾಥ್ ನಡುವೆ ವಾಗ್ಯುದ್ಧವಾಗಿದೆ. ಮಾತಿಗೆ ಮಾತು ಬೆಳೆದ ಪರಿಣಾಮ, ಹರೀಶ್ ಯಾಕೆ ಬೈಯ್ಯುತ್ತಿದ್ದೀಯ? ಎಂದು ಅನಿಲ್ ಗೆ ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಅನಿಲ್ ಅಲ್ಲಿದ್ದ ಬಿಯರ್ ಬಾಟಲಿಯನ್ನ ಒಡೆದು ಹರೀಶನ ಕುತ್ತಿಗೆ ಮತ್ತು ಬಲಗೈಗೆ ಹೊಡೆದಿದ್ದಾನೆ. ಹರೀಶ್ ಗಾಯಗೊಂಡು ಆಯನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಹರೀಶ್ ಹೇಳಿಕೆಯ ಮೇಲೆ ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here