ಚಿಕ್ಕಮಗಳೂರು: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆನಂದ ಎಂಬಾತನಿಗೆ ಮೂರು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡವನ್ನು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶರಾದ ವಿನುತಾ ಪಿ.ಶೆಟ್ಟಿ ಈ ಆದೇಶ ನೀಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಶಿಕ್ಷೆ ವಿಧಿಸಿದ್ದಾರೆ. ಬಾಲಕಿಗೆ 20 ಸಾವಿರ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ:
ಕಳೆದ ವರ್ಷ ಜೂನ್ 17ರಂದು ಪ್ರಕರಣ ನಡೆದಿತ್ತು. ಕೊಪ್ಪ ತಾಲ್ಲೂಕಿನ ಕಳಸಾ ಪುರ ಬಳಿಯ ಕಾಫಿ ತೋಟದಲ್ಲಿ 17 ವರ್ಷದ ಬಾಲಕಿ, ಬಾಲಕಿಯ ತಾಯಿ, ತಾಯಿಯ ಸಹೋದರ ಆನಂದ ವಾಸವಾಗಿದ್ದರು. ಆನಂದ ಬಾಲಕಿಗೆ ಥಳಿಸಿ ಬಲತ್ಕಾರ ಮಾಡಿದ್ದಾನೆ ಎಂದು ತಾಯಿ ಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಎನ್.ಎನ್.ರವಿ ಪ್ರಕರಣದ ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪೊಕ್ಸೊ ಕೋರ್ಟ್ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಬಿ.ಎಚ್. ಶ್ರೀಹರ್ಷ ವಾದ ಮಂಡಿಸಿದ್ದರು.
Related