23.2 C
Shimoga
Sunday, November 27, 2022

ಬಾಳೂರಿನಲ್ಲಿ ಜ್ಞಾನ ಕಾಶಿ ಕೃಷಿ ಮಾಹಿತಿ ಕೇಂದ್ರ ಆರಂಭ


ರಿಪ್ಪನ್‌ಪೇಟೆ: ಇರುವಕ್ಕಿಯ ಕೆಳದಿ ಶಿವಪ್ಪನಾಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ 4 ನೇ ವರ್ಷದ ಕೃಷಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಉದ್ದೇಶದಿಂದ ಬಾಳೂರು ಗ್ರಾಮಕ್ಕೆ ನಿಯೋಜಿಸಲಾಗಿದೆ.


ಜ್ಞಾನ ಕಾಶಿ ಕೃಷಿಮಾಹಿತಿ ಕೇಂದ್ರವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ಉದ್ಘಾಟಿಸಿದರು.


ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವದ ಸಂಯೋಜಕ ಡಾ.ಗಜೇಂದ್ರರವರು ಮಾತನಾಡಿ, ಮಲೆನಾಡಿನಲ್ಲಿ ವೈಜ್ಞಾನಿಕ ಕೃಷಿಯ ಮಹತ್ವವನ್ನು ವಿವರಿಸಿ ರೈತರಿಗೆ ಕೃಷಿ ಸಂಬಂಧಿತ ಹೊಸ ತಾಂತ್ರಿಕ ತಂತ್ರಜ್ಞಾನವನ್ನು ಬಳಸುವುದರ ಬಗ್ಗೆ ಪಠ್ಯದಲ್ಲಿ ಕಲಿತ ವಿಷಯವನ್ನು ಪ್ರಾಯೋಗಿಕವಾಗಿ ಕಲಿಯಲು ವಿಶ್ವವಿದ್ಯಾಲಯ ಇಂತಹ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.


ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರ ಪ್ರಾಧ್ಯಾಪಕರಾದ ಡಾ|| ಶರಣಬಸಪ್ಪ ರೈತರು ತಮ್ಮ ಜಮೀನಿನಲ್ಲಿ ಹಾಕಲಾದ ಶುಂಠಿ ಭತ್ತ ಬೆಳೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ಇತ್ತೀಚಿನ ದಿನಗಳಲ್ಲಿ ಭತ್ತ-ಶುಂಠಿ ಬೆಳೆಯಲ್ಲಿ ಕಾಣಿಸಿಕೊಂಡ ರೋಗದ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ವಿವರಿಸಿದರು.


ಜ್ಞಾನಕಾಶಿ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮೀನುಮರಿ ಡಾಕಪ್ಪ,ಉಪಾಧ್ಯಕ್ಷ ಬಿ.ದಿವಾಕರ್, ಗ್ರಾ.ಪಂ ಸದಸ್ಯರಾದ ರಾಜಣ್ಣ, ರೇಖಾ, ರಿಪ್ಪನ್‌ಪೇಟೆ ರೈತ ಸಂಪರ್ಕ ಕೆಂದ್ರದ ಕೃಷಿ ಆಧಿಕಾರಿ ಶಾಂತಮೂರ್ತಿ, ಪಿಡಿಓ ಭರತ್, ಕೃಷಿ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತ್ರ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಳೂರು ಗ್ರಾಮಸ್ಥರು ಇನ್ನಿತರರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!