ಬಾಳೆಕೊಪ್ಪ ಗ್ರಾಮದಲ್ಲಿ 100 ಲೋಡ್‌ನ‌ಷ್ಟು ಅಕ್ರಮ ಮರಳು ಸಂಗ್ರಹಣೆ ; ಇದು ಯಾವ ಅಧಿಕಾರಿಗಳ ಕಣ್ಣಿಗೂ ಬೀಳಲಿಲ್ಲವೇ ?

0
768

ಹೊಸನಗರ: ತಾಲ್ಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ಹಗಲು – ರಾತ್ರಿ ಎನ್ನದೇ ಹಿಟಾಚಿ ಬಳಸಿ ಸುಮಾರು ಅಂದಾಜು 80ರಿಂದ 100ಲಾರಿ ಲೋಡ್‌ನ‌ಷ್ಟು ಮರಳು ಸಂಗ್ರಹಿಸಿಟ್ಟಿದ್ದು ಆದರೆ ಇಲಾಖೆಯವರ ಗಮನಕ್ಕೆ ಅಲ್ಲಿನ ಗ್ರಾಮಸ್ಥರು ಫೋನ್ ಮೂಲಕ ತಿಳಿಸಿದರೂ ಯಾವ ಅಧಿಕಾರಿಗಳಿಗೂ ಈ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಕಣ್ಣಿಗೆ ಕಾಣದಿರುವುದು ದುರದಷ್ಟಕರ ವಿಷಯವಾಗಿದೆ.

ತಾಲ್ಲೂಕಿನಲ್ಲಿ ಹಗಲು – ರಾತ್ರಿ ಎನ್ನದೇ ಪಿಕಪ್, ಲಾರಿಗಳ ಮೂಲಕ ಅಕ್ರಮವಾಗಿ ಮರಳು ಸಾಗಣಿಕೆ ನಡೆಯುತ್ತದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಈ ವರ್ಷದ ಮಳೆಗಾಲದಲ್ಲಿ ಗ್ರಾಮಗಳ ಗ್ರಾಮಸ್ಥರು ಓಡಾಟ ನಡೆಸುವುದೇ ಕಷ್ಟಕರವಾಗಿದೆ.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಅಕ್ರಮ ಮರಳು ಸಂಗ್ರಹಿಸಿಟ್ಟಿದ್ದಾರೆ ಎಂದು ಹೇಳಲಾಗಿದೆ. ಅದೇ ರೀತಿ ಹೊಸನಗರ ತಾಲ್ಲೂಕು ಬಾಳೆಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಿಂದ 300 ಮೀಟರ್ ದೂರದ ಹೂವಪ್ಪ ಬಿನ್ ನಾಗನಾಯ್ಕ್ ರವರ ಮನೆಯ ಹಿಂಭಾಗ ಅರಣ್ಯ ಜಾಗದಲ್ಲಿ ಬಲಾಢ್ಯರೊಬ್ಬರು ಸುಮಾರು 80ಲಾರಿ ಮರಳನ್ನು ದಾಸ್ತಾನು ಮಾಡಿ ಇಟ್ಟಿದ್ದಾರೆಂದು ತಾಲ್ಲೂಕಿನ ಎಲ್ಲ ಅಧಿಕಾರಿಗಳಿಗೂ ಫೋನ್ ಮೂಲಕ ತಿಳಿಸಿದರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಬರುತ್ತಿರುವುದು ಬಿಟ್ಟರೆ ಅವರ ಕಣ್ಣಿಗೆ ದಾಸ್ತಾನು ಮರಳು ಕಣ್ಣಿಗೆ ಬೀಳದಿರುವುದು ಅಲ್ಲಿನ ಗ್ರಾಮಸ್ಥರಿಗೆ ಚಿಂತೆಯುಂಟು ಮಾಡಿದೆ‌.

ಗ್ರಾಮಸ್ಥರು ಬಂದು ದಾಸ್ತಾನು ಇರುವ ಮರಳು ತೋರಿಸಿದರೆ ರಾತ್ರಿ ವೇಳೆಯಲ್ಲಿ ಓಡಾಟ ನಡೆಸುವುದು ಕಷ್ಟ ಎಂದು ಅಧಿಕಾರಿಗಳು ಎದುರಿಗೆ ಬಾರದೆ ಫೋನ್ ಮೂಲಕ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ನಮ್ಮ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದೆ. ಈ ವರ್ಷ ಮಳೆಗಾಲದಲ್ಲಿ ಓಡಾಟ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ಇನ್ನಾದರೂ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮರಳು ಸರ್ಕಾರದ ವಶವಾಗುವುದೇ ಕಾದು ನೋಡಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here