ಬಾಳೆಬರೆ ಫಾಲ್ಸ್’ಗೆ ಜೀವ ಕಳೆ ; ವೈಯ್ಯಾರವನ್ನು ನೀವೂ ಒಮ್ಮೆ ಬಂದು ನೋಡಿ

0
401

ಹೊಸನಗರ: ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು. ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ.

ತಾಲ್ಲೂಕಿನ ಬಾಳೆಬರೆ ಫಾಲ್ಸ್ ಸೌಂದರ್ಯಕ್ಕೆ ಮನ ಸೋಲದವರಿಲ್ಲ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆ-ಉಡುಪಿ ಜಿಲ್ಲೆ ಸಿದ್ದಾಪುರ ರಸ್ತೆಯಲ್ಲಿ ಸಾಗಿದರೆ, ಮುಂಗಾರು ಮಳೆಯ ಜೊತೆಗೆ ಬ್ಯೂಟಿಫುಲ್ ಫಾಲ್ಸ್ ನಿಮ್ಮ ಕಣ್ಣಿಗೆ ಬೀಳುತ್ತದೆ.

ಇದಲ್ಲದೇ ಇನ್ನೂ ಹಲವು ಮಾರ್ಗಗಳ ಮೂಲಕ ಬಾಳೆಬರೆ ಫಾಲ್ಸ್ ನೋಡಲು ಬರಬಹುದಾಗಿದೆ. ಸುಮಾರು 150 ಅಡಿ ಎತ್ತರದಿಂದ ಬಂಡೆಯಿಂದ, ಬಂಡೆಗೆ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಅತಿ ಹೆಚ್ಚು ಮಳೆಯಾಗುವ ಆಗುಂಬೆಗೆ ಪೈಪೋಟಿ ನೀಡುವಂತೆ ಹುಲಿಕಲ್ ಘಾಟ್ ನಲ್ಲಿ ಮಳೆಯಾಗುತ್ತದೆ. ಮಳೆಗಾಲದಲ್ಲಿ ಬಾಳೆಬರೆ ಫಾಲ್ಸ್ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಮನಸಿಗೆ ಮುದ ನೀಡುತ್ತದೆ. ಜೀವಕಳೆ ಪಡೆದಿರುವ ಬಾಳೆಬರೆ ಫಾಲ್ಸ್ ನ ವೈಯ್ಯಾರವನ್ನು ನೀವೂ ಮಳೆಗಾಲ ಮುಗಿಯುವದರೊಳಗೆ ನೋಡಿ ಬನ್ನಿ.

ಅಂದಹಾಗೇ ಸುತ್ತಮುತ್ತ ಸಾವೆಹಕ್ಲು, ಚಕ್ರಾ, ವರಾಹಿ ಡ್ಯಾಂ, ಕವಲೇದುರ್ಗ ಮೊದಲಾದ ಪ್ರವಾಸಿ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.

ಜಾಹಿರಾತು

LEAVE A REPLY

Please enter your comment!
Please enter your name here