ಬಾಳೆಹಣ್ಣು ಬೀರಿ ‘ಪದ್ಮಾವತಿ ಮಾತಾಕಿ ಜೈ’ ಜಯಘೋಷಣೆಯಲ್ಲಿ ಹೊಂಬುಜ ಜಗನ್ಮಾತೆ ಶ್ರೀಪದ್ಮಾವತಿ ಅಮ್ಮನವರ ರಥೋತ್ಸವ

0
442

ರಿಪ್ಪನ್‌ಪೇಟೆ: ಜೈನರ ಜೈನ ದಕ್ಷಿಣ ಕಾಶಿಯೆಂದೆ ಪ್ರಖ್ಯಾತಿ ಹೊಂದಿರುವ ಇತಿಹಾಸ ಪ್ರಸಿದ್ದ ಹೊಂಬುಜ ಜಗನ್ಮಾತೆ ಪದ್ಮಾವತಿ ಅಮ್ಮನವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಗಿ ಜರುಗಿತು.

ದೇವಸ್ಥಾನದಿಂದ ಮಹಾಮಾತೆ ಪದ್ಮಾವತಿ ದೇವಿಯನ್ನು ಹೊತ್ತು ತಂದು ರಥೋತ್ಸವದಲ್ಲಿ ವಿರಾಜಮಾನವಾಗಿ ಕುಳ್ಳಿರಿಸಿ ಅಮ್ಮನವರ ರಥೋತ್ಸವಕ್ಕೂ ಮುನ್ನಾ ಉತ್ಸವ ಮೂರ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಜಗತ್ಪಾಲ್‌ಇಂದ್ರರವರು ಮತ್ತು ಇತರ ವೃಂದದವರುಗಳು ವಿಶೇಷ ಪೂಜೆ ಸಲ್ಲಿಸಿದರು. ಅಲಂಕೃತ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿವಿಧಾನಗಳು ಬಲಿಪೂಜೆಯ ನಂತರ ಮೂಲನಕ್ಷತ್ರದಲ್ಲಿ ಮಧ್ಯಾಹ್ನ 1.15 ಕ್ಕೆ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಮಾರ್ಗದರ್ಶನದಲ್ಲಿ ಸಾವಿರಾರು ಭಕ್ತರುಗಳ ಸಮ್ಮುಖದಲ್ಲಿ ರಥವನ್ನು ಎಳೆದು ಸಂಭ್ರಮಿಸಿದರು.

ಶ್ರೀಗಳು ಚಾಲನೆ ನೀಡುತ್ತಿದ್ದಂತೆ ನೆರೆದ ಭಕ್ತರ ರಥ ಎಳೆಯುವ ಸಂದರ್ಭದಲ್ಲಿ ಪದ್ಮಾವತಿ ಮಾತಾಕಿ ಜೈ ಜಯಘೋಷ ಮೊಳಗಿಸುತ್ತಾ ಈ ಭಾರಿಯ ದೇವಿ ಜಗನ್ಮಾತೆ ಸಮೃದ್ದ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಿ ರಥಕ್ಕೆ ಬಾಳೆಹಣ್ಣು ಬೀರಿ ಪ್ರಾರ್ಥಿಸಿದರು.

ಮಳೆ ಬೆಳೆ ಸಂವೃದ್ದವಾಗಲಿ ದೇಶದೆಲ್ಲಡೆ ಶಾಂತಿ ಸೌಹಾರ್ದತೆಯಿಂದ ಧರ್ಮದ ಸಹಿಷ್ಣಥೆಯೊಂದಿಗೆ ಎಲ್ಲರೂ ಒಂದಾಗಿ ರಥೋತ್ಸವವನ್ನು ಆಚರಿಸುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಂಬದಹಳ್ಳಿ ಜೈನ ಮಠದ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮತ್ತು ಆರತಿಪುರ ಮಠದ ಸ್ವಸ್ತಿ ಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಲವರು ವೈಯಕ್ತಿಕ ಹರಕೆಯನ್ನು ಕಟ್ಟಿಕೊಂಡು ಭಕ್ತರು ಬಾಳೆಹಣ್ಣು ರಥಕ್ಕೆ ಎರಚಿ ತಮ್ಮ ಭಕ್ತಿಯ ಪರಾಕಾಷ್ಟತೆಯನ್ನು ಸಮರ್ಪಿಸುತ್ತಿದ್ದು ವಿಶೇಷವಾಗಿತ್ತು.

ಕೋವಿಡ್‌ನಿಂದಾಗಿ ಎರಡು ವರ್ಷ ರಥೋತ್ಸವವನ್ನು ಸರ್ಕಾರದ ನಿಯಮದಂತೆ ನಿಬಂಧನೆಯಿಂದಾಗಿ ರಥೋತ್ಸವವನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಭಾರಿ ನಿರೀಕ್ಷೆಗೂ ಮೀರಿದ ಸಾವಿರಾರು ಭಕ್ತರು ಮಧ್ಯಾಹ್ನದ ಬಿರು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಠದ ಗಜರಾಜನ ಗಾಂಭೀರ್ಯ ನಡಿಗೆಯೊಂದಿಗೆ ಸಾಗರದ ಶಿವಪ್ಪನಾಯ್ಕ ಮಹಿಳಾ ಕಲಾ ತಂಡದವರಿಂದ ಡೊಳ್ಳು ಪ್ರದರ್ಶನದೊಂದಿಗೆ ರಥೋತ್ಸವವು ದೇವಸ್ಥಾನದಿಂದ ಹೊರಟು ಅಂಚೆ ಕಛೇರಿ ಮಾರ್ಗದಿಂದ ಪ್ರಮುಖ ರಸ್ತೆಯಲ್ಲಿ ತಳಿರು ತೋರಣಗಳ ಮತ್ತು ರಂಗೋಲಿಯ ಸ್ವಾಗತದೊಂದಿಗೆ ಭಕ್ತರ ದೇವಿಯನ್ನು ಸ್ವಾಗತಿ ಹಣ್ಣು ಕಾಯಿ ಸಮರ್ಪಿಸುತ್ತಿರುವುದು ವಿಶೇಷವಾಗಿತ್ತು.

ದಾಸೋಹದ ವ್ಯವಸ್ಥೆ:

ರಥೋತ್ಸವ ಕಾರ್ಯಕ್ರಮಕ್ಕೆ ಬಂದಂತಹ ಭಕ್ತಾಧಿಗಳಿಗೆ ಮಠದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಬಗೆಬಗೆಯ ಭಕ್ಷ್ಯ ಭೋಜನವನ್ನು ಸವಿದು ಹರ್ಷಿತರಾದರು.

ಜಾಹಿರಾತು

LEAVE A REPLY

Please enter your comment!
Please enter your name here