ಬಾವಿ ಕೆಲಸ ಮಾಡುವಾಗ ಮಣ್ಣು ಕುಸಿದು ಕಾರ್ಮಿಕ ಸಾವು..!

0
786

ಮೂಡಿಗೆರೆ: ಬಾವಿ ಕೆಲಸ ಮಾಡುವಾಗ ಮಣ್ಣು ಕುಸಿದು ಕಾರ್ಮಿಕ ಸಾವಿಗೀಡಾಗಿರುವ ದಾರುಣ ಘಟನೆ ಕಳಸದ ಯಡೂರು ಗ್ರಾಮದಲ್ಲಿ ನಡೆದಿದೆ.

ಮನೋಜ್ (45) ಮೃತ ಕಾರ್ಮಿಕ. ಸೋಮವಾರ ಕಳಸ ಸುತ್ತಮುತ್ತ ಮಳೆಯಾಗಿತ್ತು. ಇದರಿಂದ ಮಣ್ಣು ಸಡಿಲಗೊಂಡಿದೆ. ಮಂಗಳವಾರ ಕಾರ್ಮಿಕ ಕೆಲಸ ಮಾಡುವಾಗ ಮಣ್ಣು ಕುಸಿತದಿಂದ ಸಾವಿಗೀಡಾಗಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕಳಸ ಸುತ್ತಮುತ್ತ ಬಾವಿ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ಬಾವಿ ರಿಂಗ್ ಮಾಡುವ ಕಾರ್ಮಿಕರ ತಂಡದ ಸದಸ್ಯನಾಗಿದ್ದ ಮನೋಜ್ ಇತ್ತೀಚಿಗೆ ಯಡೂರು ಗ್ರಾಮದ ಕೆರೆದಿಡಿಗೆ ಎಂಬಲ್ಲಿ ಹಿರೇಬೈಲು ಗ್ರಾಪಂ ನಿಂದ ನಿರ್ಮಿಸಲಾಗುತ್ತಿದ್ದ ಬಾವಿಗೆ ರಿಂಗ್ ಅಳವಡಿಸುವ ಕೆಲಸ ಮಾಡುತ್ತಿದ್ದರು.

ನಿರ್ಮಾಣ ಹಂತದಲ್ಲಿದ್ದ ಈ ಬಾವಿ ಬಳಿ ಕೆಲಸ‌ ಮಾಡಲು ಮಂಗಳವಾರ ಮನೋಜ್ ಇತರ ಕಾರ್ಮಿಕರೊಂದಿಗೆ ಕೆರೆದಿಡಿಗೆಗೆ ತೆರಳಿ ಕೆಲಸ ಮಾಡುತ್ತಿದ್ದ ವೇಳೆ ಬಾವಿ ಬದಿಯಲ್ಲಿ ಹಾಕಿದ್ದ ಮಣ್ಣು ಕುಸಿದು ಮನೋಜ್ ಮೇಲೆ ಬಿದ್ದಿದೆ.

ಕೇರಳದ ಮನೋಜ್ ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದು, ಅವಿವಾಹಿತನಾಗಿದ್ದ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕೇರಳಕ್ಕೆ ಕಳುಹಿಸಿಕೊಡಲಾಗಿದೆ.

ಈ ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here