ಬಿಎಸ್‌ವೈ ಶೀಘ್ರ ಗುಣಮುಖರಾಗುವಂತೆ ಶಾಸಕ ಹರತಾಳು ಹಾಲಪ್ಪನವರಿಂದ ಹೊಸನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0
601

ಹೊಸನಗರ : ಇತಿಹಾಸ ಪ್ರಸಿದ್ಧ ಹೊಸನಗರದ ಗಣಪತಿ ದೇವಸ್ಥಾನದಲ್ಲಿ ಶಾಸಕರು, ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪನವರು ಸಿಎಂ ಬಿ.ಎಸ್ ಯಡಿಯೂರಪ್ಪನವರು ಹಾಗೂ ರಾಜ್ಯದ ಜನತೆ ಕೊರೊನಾ ಮಹಾಮಾರಿಯಿಂದ ಋಣಮುಕ್ತರಾಗುವಂತೆ ಕೋರಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ದೇವಸ್ಥಾನ ಹಾಗೂ ಪಕ್ಕದ ಪುಷ್ಕರಣಿಯನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಪಟ್ಟಣದ ನಾಗರೀಕರ ಕ್ಷೇಮಾಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಈ ನಿಟ್ಟಿನಲ್ಲಿ ನಾನು ತಮ್ಮೊಂದಿಗೆ ಇರುವೆನೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಆಲವಳ್ಳಿ ವೀರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್, ಎಂ.ಎನ್ ಸುಧಾಕರ, ಮೆಣಸೆ ಆನಂದ್, ತಾಲೂಕು ಪಂಚಾಯತ್ ಸದಸ್ಯರಾದ ಕೆ.ವಿ ಸುಬ್ರಮಣ್ಯ, ಶ್ರೀಮತಿ ರುಕ್ಮಿಣಿ ರಾಜು, ಸೀಮಾ ತೆಂಡೂಲ್ಕರ್, ಪಟ್ಟಣ ಪಂಚಾಯತಿ ಸದಸ್ಯ ಸುರೇಂದ್ರ ಕೋಟ್ಯಾನ್, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ದೇವಸ್ಥಾನ ಸಮಿತಿಯ ಕೆ.ಎಸ್ ಕನಕರಾಜ, ಎನ್ ಶ್ರೀಧರ್ ಉಡುಪ, ಸುದೇಶ್ ಕಾಮತ್, ಎಂ.ಕೆ ವಿಷ್ಣುಮೂರ್ತಿ, ವಾದಿರಾಜ ಭಟ್, ಚಾಲುಕ್ಯ, ಬಸವರಾಜ್ ಹಿರೇಮಣತಿ, ಗಣೇಶ ಮೊದಲಾದವರು ಉಪಸ್ಥಿತರಿದ್ದರು.

ಹೊಸನಗರ ಹಾಗೂ ಸುತ್ತಮುತ್ತಲಿನ ಸುದ್ದಿಗಳಿಗಾಗಿ ಸಂಪರ್ಕಿಸಿ: 8277173177
ಜಾಹಿರಾತು

LEAVE A REPLY

Please enter your comment!
Please enter your name here